ಈ ಶಿಶಿಕ್ಷು ಹಾಗೂ ಉದ್ಯೋಗ ಮೇಳದಲ್ಲಿ ಕಲಬುರಗಿ ಮತ್ತು ಬೆಂಗಳೂರು ಹಾಗೂ ಸುತ್ತಮುತ್ತಲಿನ ಸುಮಾರು 20ಕ್ಕೂ ಹೆಚ್ಚು ವಿವಿಧ ಬೃಹತ್ ಮತ್ತು ಮದ್ಯಮ ಹಾಗೂ ಸಣ್ಣ ಕೈಗಾರಿಕಾ ಉದ್ಯಮೇದಾರರು ಭಾಗವಹಿಸುತ್ತಿದ್ದು, ಇಚ್ಚೆಯುಳ್ಳ ಅಭ್ಯರ್ಥಿಗಳು ಮೇಲ್ಕಂಡ ದಿನದಂದು ನಡೆಯುವ ಶಿಶಿಕ್ಷು ಹಾಗೂ ಉದ್ಯೋಗ ಮೇಳಕ್ಕೆ ಬಯೋಡೆಟಾ, ಎಸ್.ಎಸ್.ಎಲ್.ಸಿ ಮತ್ತು ಐಟಿಐ ಅಂಕಪಟ್ಟಿ, ಎರಡು ಭಾವಚಿತ್ರ, ಆಧಾರ್ ಕಾರ್ಡ್, ಹಾಗೂ ಇತರೆ ಮೂಲ ದಾಖಲಾತಿಗಳ ಪ್ರತಿಗಳೊಂದಿಗೆ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ (ಪುರುಷ), ಎಂ.ಎಸ್.ಕೆ.ಮಿಲ್ ರಸ್ತೆ, ಕಲಬುರಗಿ ಇಲ್ಲಿ ಹಾಜರಾಗಬೇಕು.