ನೀರಿಗಾಗಿ ಗ್ರಾಮಸ್ಥರು ಪ್ರತಿಭಟನೆ ಮಾಡಿ, ಸ್ಥಳಕ್ಕೆ ಆಗಮಿಸಿದ ತಾಪಂ ಅಧಿಕಾರಿಗೆ ಸದಸ್ಯ ರಮೇಶ ಕೇಶ್ವಾರ ನೇತೃತ್ವದಲ್ಲಿ ಮನವಿ ಸಲ್ಲಿಸಿ, ಗ್ರಾಮದ ಪುರಾತನ ಬಾವಿಯಲ್ಲಿ ಹೇರಳವಾದ ಜಲಮೂಲವಿದೆ. ಆದರೆ, ಕಳೆದ ಎರಡು&ಮೂರು ವರ್ಷಗಳಿಂದ ಬಾವಿಯ ಸುತ್ತಮುತ್ತ ದಟ್ಟವಾಗಿ ಗಿಡಗಂಟಿ ಬೆಳೆದು ನಿಂತಿವೆ. ಬಾವಿಯ ಒಳಗೂ ಹೂಳು ಮತ್ತು ಕಸದ ರಾಶಿ ತುಂಬಿಕೊಂಡಿದ್ದರಿಂದ ನೀರು ಬಳಕೆಗೆ ಯೋಗ್ಯವಾಗಿಲ್ಲ. ಅದಕ್ಕಾಗಿ ಬಡಾವಣೆಯ ಜನರು ನೀರಿಗಾಗಿ ಪರಿತಪಿಸುವಂತಾಗಿದೆ ಎಂದು ಅಳಲು ತೋಡಿಕೊಂಡರು.