ಪರಿಸರ ಸಂರಕ್ಷಣೆಗೆ ಬೇಕಿದೆ ದೃಢ ಸಂಕಲ್ಪ

 ಬಸವಕಲ್ಯಾಣ ತಾಲೂಕಿನ ಖಾನಾಪುರ(ಕೆ) ಹತ್ತಿರದ ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಕೇಂದ್ರದ ಪ್ರಭು ಭವನದಲ್ಲಿ ಶುಕ್ರವಾರ ವಿಶ್ವ ಪರಿಸರ ದಿನ ಆಚರಿಸಲಾಯಿತು. ರಾಜಯೋಗಿನಿ ಬ್ರಹ್ಮಾಕುಮಾರಿ ಸರಸ್ವತಿ ಬಹೆನಜಿ, ಭೀಮಾಶಂಕರ, ಬಸವಂತ ರೆಡ್ಡಿ, ಮಾಧವರಾವ ಪಾಟೀಲ್​, ಬಿ.ಕೆ. ಬೀರಪ್ಪ ಗುಂಜೆಟ್ಟೆ, ಬಿ.ಕೆ.ರೇಣುಕಾ, ದೈವಿಶೀಲಾ ಮದನೆ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಸರಸ್ವತಿ ಬಹೆನಜಿ ಹೇಳಿಕೆ
  • ಖಾನಾಪುರ(ಕೆ) ದಿನಾಚರಣೆ
ಬಸವಕಲ್ಯಾಣ: ನೆಮ್ಮದಿಯ ಜೀವನಕ್ಕೆ ಬೇಕಿರುವ ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಿದ್ದು, ಪರಿಸರ ಸಂರಕ್ಷಣೆಗೆ ನಾವೆಲ್ಲರೂ ದೃಢ ಸಂಕಲ್ಪ ಮಾಡಬೇಕು ಎಂದು ಕೇಂದ್ರದ ರಾಜಯೋಗಿನಿ ಬ್ರಹ್ಮಾಕುಮಾರಿ ಸರಸ್ವತಿ ಬಹೆನಜಿ ಹೇಳಿದರು.
ತಾಲೂಕಿನ ಖಾನಾಪುರ(ಕೆ) ಹತ್ತಿರದ ಪ್ರಜಾಪಿತಾ ಬ್ರಹ್ಮಾಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಕೇಂದ್ರದ ಪ್ರಭು ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಪ್ರಕೃತಿ ನಮಗೆ ಸ್ವಚ್ಛ ಗಾಳಿ, ಶುದ್ಧ ನೀರು, ಆಹಾರ ಹಾಗೂ ನೈಸರ್ಗಿಕ ಸಂಪನ್ಮೂಲ ಒದಗಿಸಿ ಕೊಡುತ್ತದೆ. ಇದನ್ನು ಸಂರಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಹೆಚ್ಚುತ್ತಿರುವ ತಾಪಮಾನ, ಅನಿಯಮಿತ ಮಳೆ, ಬರ, ಪ್ರವಾಹ ಮತ್ತು ಇತರ ನೈಸರ್ಗಿಕ ವಿಕೋಪಗಳು ಹವಾಮಾನ ಬದಲಾವಣೆಯ ಪರಿಣಾಮಗಳಾಗಿವೆ. ಹೆಚ್ಚುತ್ತಿರುವ ಮಾಲಿನ್ಯ,ಜಾಗತಿಕ ತಾಪಮಾನ ಏರಿಕೆ ಮತ್ತು ಅರಣ್ಯ ನಾಶವು ಇಡೀ ಜಗತ್ತಿಗೆ ಗಂಭೀರ ಸವಾಲುಗಳಾಗಿ ಪರಿಣಮಿಸಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಡೈಮಂಡ್​ ಕಾಲೇಜಿನ ಆಡಳಿತಾಧಿಕಾರಿ ಭೀಮಾಶಂಕರ, ಉಪನ್ಯಾಸಕರಾದ ಬಸವಂತ ರೆಡ್ಡಿ, ಮಾಧವರಾವ ಪಾಟೀಲ್​, ಬಿ.ಕೆ. ಬೀರಪ್ಪ ಗುಂಜೆಟ್ಟೆ, ಬಿ.ಕೆ.ರೇಣುಕಾ, ಜಿಪಂ ಮಾಜಿ ಸದಸ್ಯ ದೈವಿಶೀಲಾ ಮದನೆ ಇತರರಿದ್ದರು. ಈ ವೇಳೆ ಕೇಂದ್ರದ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net