ಸಸಿ ನೆಟ್ಟು ಸಸ್ಯ ಸಂಪತ್ತು ಹೆಚ್ಚಿಸಲು ಶ್ರಮಿಸಿ

 ಐನಾಪುರದಲ್ಲಿ ಹಮ್ಮಿಕೊಂಡಿದ್ದ ಪರಿಸರ ಸಂರಕ್ಷಣೆ ಜನಜಾಗೃತಿ ಅಭಿಯಾನಕ್ಕೆ ಪರಿಸರವಾದಿ ಶೈಲೇಂದ್ರ ಕಾವಡಿ ಚಾಲನೆ ನೀಡಿದರು. ಶ್ರೀ ಮುರುಗರಾಜೇಂದ್ರ ದೇವರು, ವೀರಶೆಟ್ಟಿ ಹಳ್ಳಿ, ಶ್ರೀಶೈಲ ಎಂ.ಶಾಸಿ, ಭೂಮಿಕಾ, ಭದ್ರಪ್ಪ ಸಲಗರ ಇದ್ದರು. ===
ಐನಾಪುರದಲ್ಲಿ ಹಮ್ಮಿಕೊಂಡಿದ್ದ ಪರಿಸರ ಸಂರಕ್ಷಣೆ ಜನಜಾಗೃತಿ ಅಭಿಯಾನಕ್ಕೆ ಪರಿಸರವಾದಿ ಶೈಲೇಂದ್ರ ಕಾವಡಿ ಚಾಲನೆ ನೀಡಿದರು. ಶ್ರೀ ಮುರುಗರಾಜೇಂದ್ರ ದೇವರು, ವೀರಶೆಟ್ಟಿ ಹಳ್ಳಿ, ಶ್ರೀಶೈಲ ಎಂ.ಶಾಸಿ, ಭೂಮಿಕಾ, ಭದ್ರಪ್ಪ ಸಲಗರ ಇದ್ದರು. ===
Published on
ಚಿಂಚೋಳಿ: ಭೂಮಾತೆಯ ಒಡಲು ಬೆಂಕಿ ಚೆಂಡಿನಂತಾಗುತ್ತಿದ್ದು, ಭೂಮಿಯ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ಸಸ್ಯ ಸಂಪತ್ತು ಹೆಚ್ಚಿಸುವ ಕೆಲಸ ಮಾಡಬೇಕಿದೆ ಎಂದು ಪರಿಸರವಾದಿ ಶೈಲೇಂದ್ರ ಕಾವಡಿ ಹೇಳಿದರು. ಐನಾಪುರದ ವಿಶ್ವ ಜ್ಞಾನವಾಹಿನಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಬೀದರ್​ನ ಪರಿಸರ ವಾಹಿನಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಪರಿಸರ ಸಂರಕ್ಷಣೆ ಜನಜಾಗೃತಿ ಕಾರ್ಯಕ್ರಮ ಹಾಗೂ ಏಕ್​ ಪೆಡ್​ ಮಾ ಕೆ ನಾಮ್​ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಐನಾಪುರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸರ್ಕಾರ ಹಾಗೂ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಹೆಚ್ಚು ಸಸಿಗಳನ್ನು ನೆಟ್ಟು ಪೋಷಣೆ ಮಾಡಬೇಕು. ಈ ಮೂಲಕ ಹಸಿರು ವಾತಾವರಣ ನಿರ್ಮಿಸಬೇಕು ಎಂದು ಕರೆ ನೀಡಿದರು. ರಾಂಪುರ&ಮುದನಾಳ ಮಠದ ಶ್ರೀ ಮುರುಗರಾಜೇಂದ್ರ ದೇವರು, ಕಸಾಪ ಚಿಮ್ಮನಚೋಡ ವಲಯ ಅಧ್ಯಕ್ಷ ವೀರಶೆಟ್ಟಿ ಹಳ್ಳಿ, ಪ್ರಮುಖರಾದ ಶ್ರೀಶೈಲ ಎಂ.ಶಾಸಿ, ಭೂಮಿಕಾ, ಭದ್ರಪ್ಪ ಸಲಗರ್​, ರಮೇಶ ನನ್ನೂರ, ಗೌಸ್​ ವಾಜಿದ್​, ಸೋಮನಾಥ, ಮಹಾನಂದ ಸೋನಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net