ಬೂತ್​ ಮಟ್ಟದಲ್ಲಿ ಪಕ್ಷ ಬಲಪಡಿಸಿ

ಯಾದಗಿರಿಯಲ್ಲಿ ಸೋಮವಾರ ಬಿಜೆಪಿಯಿಂದ ಆಯೋಜಿಸಿದ್ದ ನಗರ ಮಂಡಲ ಪ್ರಶಿಣ ವರ್ಗವನ್ನು ಭಾಸ್ಕರರಾವ್​ ಉದ್ಘಾಟಿಸಿದರು. ಬಸವರಾಜ ವಿಭೂತಿಹಳ್ಳಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶರಡ್ಡಿ ಮುದ್ನಾಳ್​, ಮಾಜಿ ಜಿಲ್ಲಾಧ್ಯ ಡಾ.ಶರಣಭೂಪಾಲರಡ್ಡಿ, ನಾಗರತ್ನ ಕುಪ್ಪಿ ಇತರರಿದ್ದರು.
ಯಾದಗಿರಿಯಲ್ಲಿ ಸೋಮವಾರ ಬಿಜೆಪಿಯಿಂದ ಆಯೋಜಿಸಿದ್ದ ನಗರ ಮಂಡಲ ಪ್ರಶಿಣ ವರ್ಗವನ್ನು ಭಾಸ್ಕರರಾವ್​ ಉದ್ಘಾಟಿಸಿದರು. ಬಸವರಾಜ ವಿಭೂತಿಹಳ್ಳಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶರಡ್ಡಿ ಮುದ್ನಾಳ್​, ಮಾಜಿ ಜಿಲ್ಲಾಧ್ಯ ಡಾ.ಶರಣಭೂಪಾಲರಡ್ಡಿ, ನಾಗರತ್ನ ಕುಪ್ಪಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಿವೃತ್ತ ಅಧಿಕಾರಿ ಭಾಸ್ಕರರಾವ್​ ಹೇಳಿಕೆ
  • ಬಿಜೆಪಿ ನಗರ ಮಂಡಲ ಪ್ರಶಿಣ ವರ್ಗ ಉದ್ಘಾಟನೆ
ಯಾದಗಿರಿ: ರಾಜ್ಯದಲ್ಲಿ ಮುಂಬರುವ ದಿನಗಳಲ್ಲಿ ಭಾರತೀಯ ಜನತಾ ಪಕ್ಕೆ ಉತ್ತಮ ಭವಿಷ್ಯವಿದ್ದು, ಹೀಗಾಗಿ ಪಕ್ಷವನ್ನು ಬೂತ್​ ಮಟ್ಟದಿಂದ ಪ್ರತಿಯೊಬ್ಬರೂ ಬಲಪಡಿಸಬೇಕು ಎಂದು ನಿವೃತ್ತ ಐಪಿಎಸ್​ ಅಧಿಕಾರಿ ಭಾಸ್ಕರರಾವ್​ ತಿಳಿಸಿದರು.
ನಗರದ ಎನ್​ವಿಎಂ ಹೋಟೆಲ್​ನಲ್ಲಿ ಸೋಮವಾರ ಬಿಜೆಪಿಯಿಂದ ಆಯೋಜಿಸಿದ್ದ ಪಂ.ದೀನ್​ ದಯಾಳ್​ ಉಪಾಧ್ಯಾಯ ಪ್ರಶಿಣ ಮಹಾ ಅಭಿಯಾನ, ನಗರ ಮಂಡಲ ಪ್ರಶಿಣ ವರ್ಗ ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರದಲ್ಲಿ ಕಳೆದ 12 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನಮ್ಮ ಸರ್ಕಾರ ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತಿದೆ, ಇಂದು ಮಧ್ಯಪ್ರಾಚ್ಯ ರಾಷ್ಟ್ರಗಳು ಯುದ್ಧದಿಂದ ತತ್ತರಿಸಿವೆ. ಇದರಿಂದ ಕಚ್ಚಾತೈಲಗಳ ಬೆಲೆ ಆಯಾ ರಾಷ್ಟ್ರಗಳಲ್ಲಿ ಹೆಚ್ಚಾಗಿವೆ. ಆ ದೇಶದ ಪ್ರಜೆಗಳು ಬೆಲೆ ಏರಿಕೆಯಿಂದ ತೊಂದರೆಯಲ್ಲಿದ್ದಾರೆ. ಆದರೆ ಭಾರತದಲ್ಲಿ ಪೆಟ್ರೋಲ್​ ಮತ್ತು ಡಿಸೈಲ್​ ಬೆಲೆಗಳಲ್ಲಿ ಯಾವುದೇ ಏರಿಕೆಯಾಗಿಲ್ಲ. ಇದು ನಮ್ಮ ಪ್ರಧಾನಿಗಳ ಕಾರ್ಯವೈಖರಿ ಎಂದು ಹೇಳಿದರು.
ರಾಜ್ಯದಲ್ಲೂ ಸಹ ಮುಂದಿನ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಬೇಕು. ಈ ನಿಟ್ಟಿನಲ್ಲಿ ಪದಿಂದ ಇಂಥ ವರ್ಗಗಳನ್ನು ನಡೆಸುತ್ತಿದೆ ಎಂದು ತಿಳಿಸಿದರು.
ಈ ವೇಳೆ ಜಿಲ್ಲಾಧ್ಯ ಬಸವರಾಜ ವಿಭೂತಿಹಳ್ಳಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶರಡ್ಡಿ ಮುದ್ನಾಳ್​, ಮಾಜಿ ಜಿಲ್ಲಾಧ್ಯ ಡಾ.ಶರಣಭೂಪಾಲರಡ್ಡಿ, ಹಿರಿಯ ಮುಖಂಡೆ ನಾಗರತ್ನ ಕುಪ್ಪಿ, ಹಿರಿಯ ಮುಖಂಡ ರಾಚನಗೌಡ ಮುದ್ನಾಳ್​, ದೇವಿಂದ್ರನಾಥ ನಾದ್​, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರುಶುರಾಮ ಕುರುಕುಂದಿ, ಪ್ರಶಿಣ ಮಹಾಭೀಯಾನ ಜಿಲ್ಲಾ ಸಂಚಾಲಕ ಮೌನೇಶ ಬೇಳಿಗೆರಿ, ಗ್ರಾಮೀಣ ಮಂಡಲ ಅಧ್ಯ ರಾಜಶೇಖರ ಕಾಡಂನೋರ, ನಗರ ಮಂಡಲ ಅಧ್ಯ ಲಿಂಗಪ್ಪ ಹತಿಮನಿ ಇತರರಿದ್ದರು.
"

ಬೂತ್​ ಮಟ್ಟದಲ್ಲಿನ ಅಧ್ಯರು ಆ ಬೂತ್​ಗೆ ಮುಖ್ಯಮಂತ್ರಿ ಇದ್ದಹಾಗೆ. ನಿಮ್ಮ ಬೂತ್​ಗಳನ್ನು ಭದ್ರಗೊಳಿಸಿಕೊಳ್ಳಬೇಕು. ಬಿಎಲ್​ಒಗಳೊಂದಿಗೆ ಸಮನ್ವಯ ಸಾಧಿಸಿ, ಮತದಾರರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಳ್ಳಬೇಕು. 

> ಭಾಸ್ಕರರಾವ್​ ಬಿಜೆಪಿ ಮುಖಂಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net