ಊರಲ್ಲಿ ಪ್ರತಿ ಬುಧವಾರ ವಾರದ ಸಂತೆ ನಡೆಯುತ್ತದೆ. ಪ್ರಮುಖ ವ್ಯಾಪಾರ ಮಳಿಗೆಗಳಲ್ಲಿ ಸಂಜೆಯಿಂದ ರಾತ್ರಿ 10ರವರೆಗೆ ವ್ಯಾಪಾರ ವಹಿವಾಟು ಜರುಗುತ್ತದೆ. ಸಂತೆಯಲ್ಲಿ ಸಾರ್ವಜನಿಕರು ದಿನಸಿ ವಸ್ತುಗಳ ಖರೀದಿಗೆ ಇದೇ ಪ್ರಮುಖ ಸ್ಥಾನವಾಗಿದೆ. ಆದರೆ ಎಲ್ಲೆಡೆ ಕತ್ತಲೆ ಆವರಿಸಿದ್ದರಿಂದ ಸಾರ್ವಜನಿಕರು, ವ್ಯಾಪಾರಿಗಳು, ರಸ್ತೆ ಬದಿ ಅಂಗಡಿಯವರು ಕಷ್ಟ ಅನುಭವಿಸುತ್ತಿದ್ದಾರೆ. ಗ್ರಾಪಂ ಅಧಿಕಾರಿಗಳು ಈಗಲಾದರೂ ಗಮನಹರಿಸಿ ಹೈಮಾಸ್ಟ್ ದೀಪಗಳ ದುರಸ್ತಿಗೆ ಮುಂದಾಗಬೇಕು ಎಂಬುದು ಸ್ಥಳಿಯರ ಒತ್ತಾಯವಾಗಿದೆ.