ತಕ್ಷಣ ಹೊಸ ಕಾಲುವೆ ಕಾಮಗಾರಿ ನಿಲ್ಲಿಸಿ

,
,
Published on

ಪ್ರಮುಖ ಮುಖ್ಯಾಂಶಗಳು

  • ಜಿಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ವಿನೋದಗೌಡ ಮಾಲಿ ಪಾಟೀಲ್​ ಆಗ್ರಹ
ವಡಗೇರಾ: ತಾಲೂಕಿನಿಂದ ಬೆಂಡೆಬೆಂಬಳಿವರೆಗೆ ಕೈಗೊಂಡಿರುವ ಕೃಷ್ಣ ಮೇಲ್ದಂಡೆ ಎಡಭಾಗದ ಹೊಸ ಕಾಲುವೆ ನಿರ್ಮಾಣ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದ್ದು, ತಕ್ಷಣ ಈ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ವಿನೋದ್​ ಗೌಡ ಮಾಲಿ ಪಾಟೀಲ್​ ಆಗ್ರಹಿಸಿದ್ದಾರೆ.
ತಾಲೂಕಿನ ಕೊನೆಯ ಭಾಗದ ಗ್ರಾಮಗಳಿಗೆ ಇಂದಿಗೂ ಸಮರ್ಪಕವಾಗಿ ಕಾಲುವೆ ನೀರು ತಲುಪುತ್ತಿಲ್ಲ. ಇಷ್ಟೇಲ್ಲ ಸಮಸ್ಯೆ ಇದ್ದರೂ ಸರ್ಕಾರ ನೂರಾರು ಕೋಟಿ ರೂ. ಖರ್ಚು ಮಾಡಿ ಇನ್ನಷ್ಟು ಮುಂದಿನ ಭಾಗಗಳಿಗೆ ನೀರು ತಲುಪಿಸುವ ಕಾಮಗಾರಿ ಕೈಗೊಳ್ಳುವುದು ಅಸಮಂಜಸವಾಗಿದೆ. ಇದರಿಂದ ರೈತರಿಗೆ ಯಾವುದೇ ಪ್ರಯೋಜನವಿಲ್ಲ ಎಂಬ ಆಕ್ರೋಶ ಹೊರ ಹಾಕಿದ್ದಾರೆ.
ನೀರೇ ಬಾರದ ಕಾಲುವೆ ಇದ್ದಾಗ ಮತ್ತೊಂದು ಹೊಸ ಕಾಲುವೆ ಯಾಕೆ ? ಎಂಬ ಪ್ರಶ್ನೆ ಇದೀಗ ರೈತರಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಈಗಾಗಲೇ ಜಮೀನು ಕಳೆದುಕೊಂಡ ರೈತರು ಸಂಕಷ್ಟದಲ್ಲಿದ್ದು, ಈ ಕಾಮಗಾರಿಯಿಂದ ಸರ್ಕಾರದ ಹಣ ವ್ಯರ್ಥವಾಗುತ್ತಿದೆ ಎಂಬ ಆರೋಪಿಸಿದರು. ಈ ಬಗ್ಗೆ ಅಧಿಕಾರಿಗಳು ತಕ್ಷಣ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ರೈತರೊಂದಿಗೆ ಉಗ್ರ ಹೋರಾಟ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net