ವಿದ್ಯುತ್​ ಖಾಸಗೀಕರಣಗೊಳಿಸುವುದು ಕೈಬಿಡಿ

ರಾಜ್ಯದಲ್ಲಿ ವಿದ್ಯುತ್​ ವಿತರಣೆಯನ್ನು ಖಾಸಗೀಕರಣಗೊಳಿಸುತ್ತಿರುವುದನ್ನು ಕೂಡಲೇ ಕೈಬಿಡುವಂತೆ ಆಗ್ರಹಿಸಿ ರಾಜ್ಯ ರೈತ ಸಂದ ಪದಾಧೀಕಾರಿಗಳು ಜೆಸ್ಕಾಂ ಎಂಡಿಗೆ ಬರೆದ ಮನವಿಪತ್ರವನ್ನು ಎಇಇ ಅವರಿಗೆ ಸಲ್ಲಿಸಿದರು. ರಾಮನಗೌಡ ಸಿದ್ದಾಪುರ, ಬಾಪುಗೌಡ ಬಿರಾದಾರ, ಹನುಮಂತ್ರಾಯ ಕೆಂಭಾವಿ, ಸುಭಾಷ, ಸಂತೋಷ ತಳವಾರ, ಯಂಕೋಬ ಶುಕ್ಲಾ, ಮಂಜುನಾಥ ಬೊಮ್ಮನಹಳ್ಳಿ ಇದ್ದರು.

Published on
ಹುಣಸಗಿ: ವಿದ್ಯುತ್​ ವಿತರಣೆಯನ್ನು ಖಾಸಗೀಕರಣಗೊಳಿಸುತ್ತಿರುವುದನ್ನು ಕೂಡಲೇ ಕೈಬಿಡಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಮಲ್ಲನಗೌಡ ನಗನೂರು ಆಗ್ರಹಿಸಿದ್ದಾರೆ.
ಈ ಕುರಿತು ಜೆಸ್ಕಾಂ ಎಂಡಿಗೆ ಬರೆದ ಮನವಿಯನ್ನು ಎಇಇ ಅವರಿಗೆ ಸಲ್ಲಿಸಿ ಮಾತನಾಡಿದ ಅವರು, ವಿದ್ಯುತ್​ ವಿತರಣೆಯನ್ನು ಟಾಟಾ ಪವರ್​ನಂತಹ ಕಂಪನಿಗೆ ನೀಡುವ ಸರ್ಕಾರದ ಧೋರಣೆಗೆ ಅವರು ಆಕ್ರೋಶ ವ್ಯಕ್ತಪಡಿಸಿದರು.
ಖಾಸಗೀಕರಣ ಮಾಡುವದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಸಂಸ್ಥೆಗಳು ತಮ್ಮ ಲಾಭಕ್ಕಾಗಿ ವಿದ್ಯುತ್​ ದರ ಹೆಚ್ಚಿಸಬಹುದು, ಇದು ಸಾಮಾನ್ಯ ಗ್ರಾಹಕರಿಗೆ, ರೈತರಿಗೆ ಹೊರೆಯಾಗುತ್ತದೆ. ಸರ್ಕಾರದಿಂದ ಬಡವರಿಗೆ ಸಿಗುವ ಉಚಿತ ವಿದ್ಯುತ್​ (ಗೃಹಜ್ಯೋತಿ) ಮತ್ತು ರೈತರಿಗೆ ನೀಡುವ ಸಬ್ಸಿಡಿ ಸೌಲಭ್ಯ ಕೂಡ ಸ್ಥಗಿತಗೊಳ್ಳಲಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಈ ಕುರಿತು ಸರ್ಕಾರ ಗಂಭೀತ ಚಿಂತನೆ ಮಾಡಿ ಕೈಬಿಡಬೇಕು. ಹಾಗೊಂದು ವೇಳೆ ಮುಂದುವರಿಸಿದ್ದಲ್ಲಿ ನಮ್ಮ ಸಂಘಟನೆಯಿಂಣದ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಈ ವೇಳೆ ರಾಮನಗೌಡ ಸಿದ್ದಾಪುರ, ಬಾಪುಗೌಡ ಬಿರಾದಾರ, ಹನುಮಂತ್ರಾಯ ಕೆಂಭಾವಿ, ಸುಭಾಷ, ಸಂತೋಷ ತಳವಾರ, ಯಂಕೋಬ ಶುಕ್ಲಾ, ಮಂಜುನಾಥ ಬೊಮ್ಮನಹಳ್ಳಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net