ಅಕ್ರಮ ಮರಳು-ಮುರುಮ್​ ಸಾಗಣೆ ತಡೆಯರಿ

 ಜಿಲ್ಲಾಧಿಕಾರಿ ರಾಹುಲ್​ ತುಕರಾಮ್​ ಪಾಂಡ್ವೆ
ಜಿಲ್ಲಾಧಿಕಾರಿ ರಾಹುಲ್​ ತುಕರಾಮ್​ ಪಾಂಡ್ವೆ
Published on

ಪ್ರಮುಖ ಮುಖ್ಯಾಂಶಗಳು

  • ಡಿಸಿ ರಾಹುಲ್​ ಪಾಂಡ್ವೆ ಸೂಚನೆ
ಯಾದಗಿರಿ: ಜಿಲ್ಲಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳು ಮತ್ತು ಮುರುಮ್​ ಇತರೆ ಉಪ ಖನಿಜಗಳ ಗಣಿಗಾರಿಕೆ, ಸಾಗಣೆ ತಡೆಗಟ್ಟಿ ಸೂಕ್ತ ಕಾನೂನಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ರಾಹುಲ್​ ತುಕರಾಮ್​ ಪಾಂಡ್ವೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಸುರಪುರ, ಶಹಾಪುರ, ವಡಗೇರಾ ಹಾಗೂ ಇತರ ತಾಲೂಕುಗಳ ವ್ಯಾಪ್ತಿಯಲ್ಲಿ ಅಕ್ರಮ ಮರಳು, ಮುರುಮ್​ ಇತರೆ ಉಪ ಖನಿಜಗಳ ಗಣಿಗಾರಿಕೆಯಾಗುತ್ತಿದೆ ಎಂದು ಹಲವಾರು ದೂರುಗಳು ಸ್ವೀಕೃತಿಯಾಗುತ್ತಿದ್ದು, ಈ ಸಂಬಂಧ ಯಂತ್ರಗಳ, ವಾಹನಗಳನ್ನು ಜಪ್ತಿ ಮಾಡಿಕೊಂಡು ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಕೈಗೊಳ್ಳಲು ಜಿಲ್ಲಾ ಟಾಸ್ಕ್​ ಫೋರ್ಸ್​ ಸಮಿತಿ ಸದಸ್ಯರುಗಳಿಗೆ ಈಗಾಗಲೇ ಸೂಚಿಸಲಾಗಿದೆ ಎಂದರು. ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ಅಕ್ರಮ ಮುರುಮ್​ ಗಣಿಗಾರಿಕೆಯಲ್ಲಿ ತೊಡಗಿದ್ದ ಹಿಟಾಚಿ ಯಂತ್ರವನ್ನು ಜಪ್ತಿ ಮಾಡಿ ದಂಡದ ಮೊತ್ತ ರೂ. 50 ಸಾವಿರ ರೂ.ದಂಡ ವಿಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನು ತಡೆಗಟ್ಟುವಲ್ಲಿ ಜಿಲ್ಲಾ ಟಾಸ್ಕ್​ ಫೋರ್ಸ್​ ಸಮಿತಿ ಸದಸ್ಯರುಗಳು ವಿಫಲರಾದಲ್ಲಿ ಸಮಿತಿಯ ಸದಸ್ಯರುಗಳನ್ನೆ ನೇರ ಹೊಣೆಗಾರರನ್ನಾಗಿಸಿ ಸೂಕ್ತ ಕಾನೂನಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಹಾಯಧನ ಸೌಲಭ್ಯ ಅರ್ಜಿ ಆಹ್ವಾನ
ಯಾದಗಿರಿ: ಕೈಮಗ್ಗ ಮತ್ತು ಜವಳಿ ಇಲಾಖೆಯ ನೇಕಾರ ಸಮ್ಮಾನ್​ ಯೋಜನೆಯಡಿ 2026&27ನೇ ಸಾಲಿಗೆ ಕೈಮಗ್ಗ ನೇಕಾರಿಕೆ ಹಾಗೂ ಇತರೆ ಕೈಮಗ್ಗ ನೇಕಾರಿಕೆ ವೃತ್ತಿಯನ್ನು ಹೊಂದಿದ ನೇಕಾರರಿಗೆ ವಾರ್ಷಿಕವಾಗಿ 5000 ರೂ.ಆರ್ಥಿಕ ನೆರವು ಡಿಬಿಟಿ ಮೂಲಕ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಪ್ರಸ್ತುತ ಸಾಲಿನಲ್ಲಿ ಕಡ್ಡಾಯವಾಗಿ ಪ್ರಧಾನಮಂತ್ರಿ ಜೀವನ್​ ಜ್ಯೋತಿ ಭೀಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಸುರಾ ಭೀಮಾ ಯೋಜನೆಯಡಿ ನೋಂದಾಯಿಸಿಕೊಳ್ಳಬೇಕು. ಜೂ.30ರ ಸಂಜೆ 5ರೊಳಗಾಗಿ ಅರ್ಜಿ ಸಲ್ಲಿಸಬೇಕು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net