ಅದೇ ರೀತಿ, ಪಿಎಂಎಸ್‌ವಿಎ ನಿಧಿ ಯೋಜನೆಯಡಿ ಸಾಲ ವಿತರಣೆಯಲ್ಲಿ ದೇಶದಲ್ಲಿ ಕರ್ನಾಟಕ 7ನೇ ಸ್ಥಾನ ಪಡೆದರೆ, ಮುದ್ರಾ ಯೋಜನೆಯಡಿ 6ನೇ ಸ್ಥಾನವನ್ನು ಕಾಯ್ದುಕೊಂಡಿದೆ. 2026ರ ಮಾರ್ಚ್ ಅಂತ್ಯಕ್ಕೆ ರಾಜ್ಯದಲ್ಲಿ ಬ್ಯಾಂಕ್ ಠೇವಣಿಗಳ ಬೆಳವಣಿಗೆ ದರವು ಶೇ.13.31 ಇದ್ದು, ರಾಷ್ಟ್ರೀಯ ಸರಾಸರಿಗಿಂತ (ಶೇ. 13.47) ಅಲ್ಪ ಕಡಿಮೆಯಾಗಿದೆ. ಸಾಲದ ಬೆಳವಣಿಗೆ ದರವು ಶೇ.12.77 ದಾಖಲಾಗಿದ್ದು, ರಾಷ್ಟ್ರೀಯ ಸರಾಸರಿ ಶೇ.16.08ಕ್ಕೆ ಹೋಲಿಸಿದರೆ ಕಡಿಮೆಯಾಗಿದೆ.