ರಾಜ್ಯ ಸರ್ಕಾರದ ತಂಡ ಸಿಯುಕೆಗೆ ಭೇಟಿ

ಮೀಸಲಾತಿ ವ್ಯವಸ್ಥೆ ಅಧ್ಯಯನಕ್ಕಾಗಿ ಕಲಬುರಗಿ ಕರ್ನಾಟಕ ಕೇಂದ್ರೀಯ ವಿವಿಗೆ ಮಂಗಳವಾರ ಭೇಟಿ ನೀಡಿದ್ದ ರಾಜ್ಯ ಸರ್ಕಾರದ ನಿಯೋಗದೊಂದಿಗೆ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ, ಕುಲಸಚಿವ ಡಾ.ಆರ್​.ಆರ್​.ಬಿರಾದಾರ್​, ಪ್ರೊ.ದೇವರಾಜಪ್ಪ, ಡಾ.ಬಸವರಾಜ ಕುಬಕಡ್ಡಿ ಇತರರಿದ್ದರು.
ಮೀಸಲಾತಿ ವ್ಯವಸ್ಥೆ ಅಧ್ಯಯನಕ್ಕಾಗಿ ಕಲಬುರಗಿ ಕರ್ನಾಟಕ ಕೇಂದ್ರೀಯ ವಿವಿಗೆ ಮಂಗಳವಾರ ಭೇಟಿ ನೀಡಿದ್ದ ರಾಜ್ಯ ಸರ್ಕಾರದ ನಿಯೋಗದೊಂದಿಗೆ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ, ಕುಲಸಚಿವ ಡಾ.ಆರ್​.ಆರ್​.ಬಿರಾದಾರ್​, ಪ್ರೊ.ದೇವರಾಜಪ್ಪ, ಡಾ.ಬಸವರಾಜ ಕುಬಕಡ್ಡಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮೀಸಲಾತಿ ವ್ಯವಸ್ಥೆ ಅಧ್ಯಯನ
ಕಲಬುರಗಿ: ನಗರದ ಹೊರವಲಯದ ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಕೇಂದ್ರ ಸರ್ಕಾರದ ಮೀಸಲಾತಿ ನೀತಿ ಅಕ್ಷರಶ@ ಜಾರಿಗೆ ತಂದಿದೆ ಎಂದು ವಿವಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.
ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ನಿಯೋಗ ಮಂಗಳವಾರ ವಿವಿಗೆ ಭೇಟಿ ನೀಡಿ ಕೇಂದ್ರ ಶಿಕ್ಷಣ ಸಂಸ್ಥೆಗಳ ಕಾಯ್ದೆ 2019 ಮತ್ತು ಅದರ ಅನುಷ್ಠಾನದ ಚರ್ಚೆಯಲ್ಲಿ ಮಾತನಾಡಿ, ನಿಯೋಗಕ್ಕೆ ವಿವರಣೆ ನೀಡಿದರು. ಮೀಸಲಾತಿ ನೀತಿ ಅಕ್ಷರಶ@ ಅನುಷ್ಠಾನಗೊಳಿಸುವಲ್ಲಿ ವಿವಿ ಪ್ರಯತ್ನವನ್ನು ಕೇಂದ್ರ ಸರ್ಕಾರ ಶ್ಲಾಸಿದೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ಡಾ.ರಾಕೇಶ್​ ಕುಮಾರ್​ ಕೆ, ನಿವೃತ್ತ ಐಎಎಸ್​ ಅಧಿಕಾರಿ ಇ.ವೆಂಕಟಯ್ಯ ನಿಯೋಗದ ಇತರೆ ಸದಸ್ಯರೊಂದಿಗೆ ಚರ್ಚೆ ನಡೆಸಿದರು.
ಕುಲಸಚಿವ ಪ್ರೊ.ಆರ್​.ಆರ್​.ಬಿರಾದಾರ, ಸಮಾನ ಅವಕಾಶ ಕೋಶದ ಸಂಪರ್ಕ ಅಧಿಕಾರಿ ಪ್ರೊ.ದೇವರಾಜಪ್ಪ, ಕಾನೂನು ನಿಕಾಯದ ಡೀನ್​ ಪ್ರೊ.ಬಸವರಾಜ ಕುಬಕಡ್ಡಿ, ಇಡಬ್ಲೂ$್ಯಎಸ್​ ಕೋಶದ ಸಂಪರ್ಕ ಅಧಿಕಾರಿ ಡಾ.ಗಣಪತಿ ಸಿನ್ನೂರ, ಒಬಿಸಿ ಕೋಶದ ಸಂಪರ್ಕ ಅಧಿಕಾರಿ ಡಾ.ಬಸವರಾಜ ಎಂ.ಎಸ್​, ಅಲ್ಪಸಂಖ್ಯಾತ ಕೋಶದ ಸಂಪರ್ಕ ಅಧಿಕಾರಿ ಡಾ.ಅಲಿಮ್​ ಪಾಶಾ, ಉಪ&ಕುಲಸಚಿವ ಡಾ. ಅಜರುದ್ದೀನ್​, ಡಾ.ಪಂಡಿತ್​, ಸಹಾಯಕ ಕುಲಸಚಿವ ಸುನಿಲ್​.ಕೆ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net