ಧ್ವಜಾರೋಹಣ ನೆರವೇರಿಸಿದ ತಹಸೀಲ್ದಾರ್ ಜಗದೀಶ್ ಚೌರ ಪ್ರಾಸ್ತಾವಿಕ ಮಾತನಾಡಿದರು. ತಾಪಂ ಇಒ ದೀಪಿಕಾ ನಾಯ್ಕರ್, ಪುರಸಭೆ ಮುಖ್ಯಾಧಿಕಾರಿ ವನಿತಾಬಾಯಿ, ಅಧಿಕಾರಿಗಳಾದ ಡಾ.ಗೋವಿಂದ್, ವೆಂಕಟೇಶ ಗುಡಾಳ, ಶರಣಕುಮಾರ ಕಲ್ಯಾಣಿ, ಮೌನೇಶ ಸ್ವಾಮಿ, ರಾಹುಲ್ ಇತರರಿದ್ದರು. ಉಪನ್ಯಾಸಕ ಹಣಮಂತ ಗೌಡಗಾಂವಕರ್ ಉಪನ್ಯಾಸ ನೀಡಿದರು. ಮೋಳಕೇರದಲ್ಲಿ ಸಂಭವಿಸಿದ್ದ ಕೆಮಿಕಲ್ ಸ್ಪೋಟದಿಂದ ಗಾಯಗೊಂಡ 6 ಜನರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ ಒಂದು ಲಕ್ಷ ಮೊತ್ತದ ಚೆಕ್ ವಿತರಿಸಲಾಯಿತು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು, ರೈತರು, ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಂದ ಸಾಂಸ ಕಾರ್ಯಕ್ರಮ ಜರುಗಿದವು.