ಬೆಂಗಳೂರು: ರಾಜ್ಯ ಮಟ್ಟದ ಎಸ್‌ಎಸ್‌ಎಲ್ಸಿ ಮೂರು ಪೂರ್ವ ಸಿದ್ಧತಾ ಪರೀಕ್ಷೆಯ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (ಕೆಎಸ್‌ಇಎಬಿ) ಪ್ರಕಟಿಸಿದೆ.
ಮೊದಲ ಪೂರ್ವಸಿದ್ಧತಾ ಪರೀಕ್ಷೆಯು ಜ.5ರಿಂದ 10ರವರೆಗೆ ನಡೆಯಲಿದೆ. ಎರಡನೇ ಪೂರ್ವಸಿದ್ಧತಾ ಪರೀಕ್ಷೆಯು ಜ.27ರಿಂದ ಫೆ.2ರವರೆಗೆ ಮತ್ತು ಮೂರನೇ ಪೂರ್ವಸಿದ್ಧತಾ ಪರೀಕ್ಷೆ ಫೆ.23ರಿಂದ ಫೆ.28ರವರೆಗೆ ನಡೆಯಲಿದೆ.
ಈ ಮಧ್ಯೆ ಪರೀಕ್ಷಾ ಮಂಡಳಿಯು ತನ್ನ ವೆಬ್‌ಸೈಟ್ https://kseab.karnataka.gov.in ನಲ್ಲಿ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮಾದರಿ ಪ್ರಶ್ನೆಪತ್ರಿಕೆ ಮತ್ತು ಮಾದರಿ ಉತ್ತರಗಳನ್ನು ಬಿಡುಗಡೆ ಮಾಡಿದೆ.