ಮುಖ್ಯ ರಸ್ತೆಗಳಲ್ಲಿ ನೀರು ಸಿಂಪರಣೆ ಮಾಡಿ

ನಗರಸಭೆಯಿಂದ ಯಾದಗಿರಿ ನಗರದ ಸುಭಾಷ ವೃತ್ತದ ಬಳಿ ಎರಡು ಕಡೆ ಹಾಕಲಾದ ಹಸಿರು ನೆರಳಿನ ಪರದೆ ಸ್ಥಳವನ್ನು ಶುಕ್ರವಾರ ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಪರಿಶೀಲಿಸಿದರು. ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ್​, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಲಕ್ಷ್ಮೀ ಕಾಂತ ರೆಡ್ಡಿ ಇತರರಿದ್ದರು.
ನಗರಸಭೆಯಿಂದ ಯಾದಗಿರಿ ನಗರದ ಸುಭಾಷ ವೃತ್ತದ ಬಳಿ ಎರಡು ಕಡೆ ಹಾಕಲಾದ ಹಸಿರು ನೆರಳಿನ ಪರದೆ ಸ್ಥಳವನ್ನು ಶುಕ್ರವಾರ ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಪರಿಶೀಲಿಸಿದರು. ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ್​, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಲಕ್ಷ್ಮೀ ಕಾಂತ ರೆಡ್ಡಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ತುನ್ನೂರ ಸೂಚನೆ
  • ಎಲ್​ಇಡಿಯಲ್ಲಿ ತಾಪಮಾನದ ಮಾಹಿತಿ ಹಾಕಿ
ಯಾದಗಿರಿ: ಬಿಸಿಲಿನ ತಾಪಮಾನ ದಿನೇ, ದಿನೆ ಹೆಚ್ಚಾಗುತ್ತಿದ್ದು, ಇಡೀ ನಗರ ಕಾಯ್ದು ಕೆಂಡವಾಗುತ್ತಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ನಗರದ ಮುಖ್ಯ ರಸ್ತೆಗಳಲ್ಲಿ ನೀರು ಸಿಂಪಡಿಸಬೇಕು ಎಂದು ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರಸಭೆಯಿಂದ ಸುಮಾರು ಐದು ಲ ರೂ.ವೆಚ್ಚದ ಇಲ್ಲಿನ ಸುಭಾಷ ಸರ್ಕಲ್​ ಬಳಿ ಎರಡು ಕಡೆ ಹಾಕಲಾದ ಹಸಿರು ನೆರಳಿನ ಪರದೆ ಸ್ಥಳವನ್ನು ಶುಕ್ರವಾರ ಪರಿಶೀಲಿಸಿದ ಶಾಸಕರು, ಶಾಸಿ ಚೌಕ್​ ಬಳಿ ಇರುವ ಎಲ್​ಇಡಿ ಪರದೆ ಮೇಲೆ ಬೇಸಿಗೆ ಮುಗಿಯುವವರೆಗೂ ದಿನದ ತಾಪಮಾನ ಎಷ್ಟು ಎಂಬ ಬಗ್ಗೆ ಮಾಹಿತಿ ಹಾಕಿ ಎಂದು ಸ್ಥಳದಲ್ಲಿದ್ದ ನಗರಸಭೆ ಪೌರಾಯುಕ್ತ ಉಮೇಶ ಚವ್ಹಾಣ್​, ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಲಕ್ಷಿ$್ಮಕಾಂತ ರೆಡ್ಡಿ ಅವರಿಗೆ ಹೇಳಿದರು. ನಗರದ ಮುಖ್ಯ ರಸ್ತೆಗಳಲ್ಲಿ ಟ್ಯಾಂಕರ್​ ಮೂಲಕ ನೀರು ಸಿಂಪರಣೆ ಕುರಿತು ಕೂಡಲೇ ಒಂದು ನಿರ್ಧಾರ ತೆಗೆದುಕೊಂಡು ಜಾರಿ ಮಾಡಿ ಸೂಚನೆ ನೀಡಿದರು. ಜಿಲ್ಲಾ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕರಾದ ಲಕ್ಣಿ$್ಮಕಾಂತರೆಡ್ಡಿ,
ನಗರಸಭೆ ಪೌರಾಯಕ್ತರು ಉಮೇಶ ಚವ್ಹಾಣ್​ ಹೇಳಿದರು.
ಯುಡಾ ಅಧ್ಯ ಬಾಬುರಾವ ಕಾಡ್ಲೂರ್​, ಕಾಂಗ್ರೆಸ್​ ಮುಖಂಡರಾದ ಸಾಬಣ್ಣ ಕೆಂಗೂರಿ, ಶರಣಗೌಡ ಬಲಕಲ್​, ತಿಮ್ಮಪ್ಪ ನಾಯಕ, ನಗರಸಭೆ ಸಮುದಾಯ ಸಂಟನಾಧಿಕಾರಿ ಬೀಮಣ್ಣ ವೈದ್ಯ, ನಗರಸಭೆ ಸಿಬ್ಬಂದಿಗಳಾದ ನಾಗರಾಜ ಚಿಂತನಳ್ಳಿ, ಅಶೋಕ ಯಾದವ, ಅವ್ವಮ್ಮ, ಪ್ರೇಮಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net