

ಪ್ರಮುಖ ಮುಖ್ಯಾಂಶಗಳು
ಕ್ರೀಡಾಪಟುಗಳಿಗೆ ಗಾಯಗಳು ಸಾಮಾನ್ಯವಾಗಿದ್ದು, ತಕ್ಷಣ ಚಿಕಿತ್ಸೆ ದೊರೆತಲ್ಲಿ ಬೇಗನೆ ಗುಣಮುಖರಾಗಿ ಮೊದಲಿನಂತೆ ಕ್ರೀಡೆಯಲ್ಲಿ ಪಾಲ್ಗೊಳ್ಳು ಸಾಧ್ಯವಾಗುತ್ತದೆ. ಗಾಯದ ಸಮಸ್ಯೆಗೆ ಸರಿಯಾಗಿ ಚಿಕಿತ್ಸೆ ದೊರೆಯದೆ ಕೆಲವರು ಕ್ರೀಡೆಯಿಂದ ವಿಮುಖರಾಗುತ್ತಾರೆ. ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಚಿಕಿತ್ಸೆ ಪಡೆಯಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಹಾಗಾಗಿ ಕ್ರೀಡಾ ಚಟುವಟಿಕೆಗಳಿಂದ ಉಂಟಾಗುವ ಗಾಯಗಳಿಗೆ ಉಚಿತ ಅಥವಾ ಅತೀ ಕಡಿಮೆ ದರದಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸಲು ಈ ಕೇಂದ್ರ ನೆರವಾಗಲಿದೆ.
ಸಂಸ್ಥೆಗೆ ಟ್ರಾಮಾ, ಅಪಘಾತ, ಸಂಧಿವಾತ ಸೇರಿ ನಾನಾ ಸಮಸ್ಯೆಗಳಿಂದ ನಿತ್ಯ 200-230 ಹೊರ ರೋಗಿಗಳು ಆಗಮಿಸುತ್ತಾರೆ, ಟ್ರಾಮಾ ಸೇರಿ ನಿತ್ಯ 25-30 ರೋಗಿಗಳು ದಾಖಲಾಗುತ್ತಾರೆ. ಇವರಲ್ಲಿ ಕ್ರೀಡಾ ಗಾಯಾಳುಗಳೂ ಇದ್ದಾರೆ. ಅವರಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಕ್ರೀಡಾ ಕೇಂದ್ರ ನೆರವಾಗಿದೆ.