ವಿದ್ಯಾರ್ಥಿಗಳಿಗಾಗಿ ಭಾಷಣ ಸ್ಪರ್ಧೆ 12ಕ್ಕೆ

ಸೂರ್ಯನಾರಾಯಣ
ಸೂರ್ಯನಾರಾಯಣ
Published on
ಸೇಡಂ: ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಲ್ಲಿ ಭ್ರಷ್ಟಾಚಾರ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸತ್ಯಯುಗ ಫೌಂಡೇಷನ್​ ಬೈ ಯುರೈನ್​ ನಮ@ ಟ್ರಸ್ಟ್​ನಿಂದ ಭಾಷಣ ಸ್ಪರ್ಧೆಗಳನ್ನು ಆ.12ರವರೆಗೆ ಆಯೋಜಿಸಲಾಗಿದೆ ಎಂದು ಟ್ರಸ್ಟ್​ ಅಧ್ಯಕ್ಷ ಸೂರ್ಯನಾರಾಯಣ ಚಿಮ್ಮನಚೋಡ್ಕರ್​ ತಿಳಿಸಿದರು. ಟ್ರಸ್ಟ್​ನಿಂದ ವಿವಿಧ ಸಮಾಜಮುಖಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈಗಾಗಲೇ ಮಲ್ಕಾಪಲ್ಲಿ ಸರ್ಕಾರಿ ಶಾಲೆಯಲ್ಲಿ 90ಕ್ಕು ಅಧಿಕ ಸಸಿ ನೆಡಲಾಗಿದೆ. ನರ್ಸಿಂಗ್​ ಕಾಲೇಜಿನ ವಿದ್ಯಾರ್ಥಿಗಳಿಗೆ ರೇನ್​ ಕೋಟ್​ ವಿತರಿಸಲಾಗಿದೆ. ಅಲ್ಲದೆ ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಈಗಾಗಲೇ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಅದರಲ್ಲಿ ಸುಮಾರು 74 ವಿದ್ಯಾರ್ಥಿಗಳು ಪ್ರಬಂಧ ಬರೆದಿದ್ದರು. ಬೆಂಗಳೂರಿನ ಕನ್ನಡ ಕಥಾಗುಚ್ಚ ಸಾಹಿತ್ಯ ವೇದಿಕೆಯ ಬಾಹುಬಲಿ ಜಯರಾಜ, ಮಲ್ಲಾರೆಡ್ಡಿ, ಸುಜಾತಾರೆಡ್ಡಿ ತೀರ್ಪುಗಾರರಾಗಿದ್ದರು. ಊಡಗಿಯ ಸರ್ಕಾರಿ ಪ್ರೌಢಶಾಲೆಯ ಸೌಭಾಗ್ಯ(ಪ್ರಥಮ), ಬಿಬ್ಬಳ್ಳಿ ಆದರ್ಶ ವಿದ್ಯಾಲಯದ ವೈಷ್ಣವಿ ಬಿರಾದಾರ (ದ್ವೀತಿಯ), ಹಾಬಾಳದ ಸರ್ಕಾರಿ ಪ್ರೌಢಶಾಲೆಯ ನಂದಿನಿ (ತೃತೀಯ) ಸ್ಥಾನ ಪಡೆದಿದ್ದಾರೆ. ಎಂಟು ವಿದ್ಯಾರ್ಥಿಗಳು ಚನ್ನಾಗಿ ಪ್ರಬಂಧ ಬರೆದಿರುವುದರಿಂದ ಮೋನಮ್ಮ, ಅಂಕಿತಾ, ಗಾಯತ್ರಿ, ಸಂಪತ್​, ಸಂಗೀತಾ, ಗೌರಿ, ಅಮೃತ ವರ್ಷಿಣಿ, ಸೌಜನ್ಯಗೆ ಸಮಾಧಾನಕರ ಬಹುಮಾನ ನೀಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಪ್ರಥಮ 3 ಸಾವಿರ ರೂ, ದ್ವೀತಿಯ 2 ಸಾವಿರ ರೂ. ಮತ್ತು ತೃತೀಯ 1 ಸಾವಿರ ರೂ. ನಗದು ಬಹುಮಾನ ಮತ್ತು ಪ್ರಶಸ್ತಿ ನೀಡಲಾಗುತ್ತಿದೆ. ಜತೆಗೆ ಸಮಾಧಾನಕರ ಪ್ರಶಸ್ತಿ ಪಡೆದ ಎಂಟು ಮಕ್ಕಳಿಗೆ ತಲಾ 500 ರೂ. ನಗದು ಬಹುಮಾನ ನೀಡಿ ಪ್ರಶಂಸಿಸಲಾಗಿದೆ ಎಂದು ತಿಳಿಸಿದರು. ಭೀಮಾಶಂಕರ ಗುಂಡಗುರ್ತಿ, ವಿಜಯಕುಮಾರ ಕಟ್ಟಿಮನಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net