ಈ ಆಸ್ಪತ್ರೆಯಲ್ಲಿ ಒಳರೋಗಿಗಳ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಅಪೇಕ್ಷೆಯಂತೆ 5 ಸ್ಪೆಷಲ್ ಮತ್ತು 7 ಸೆಮಿ ಸ್ಪೆಷಲ್ ವಾರ್ಡ್‌ಗಳ ಸೌಕರ್ಯ ಕಲ್ಪಿಸಲಾಗಿದೆ. ಮಧುಮೇಹ ಟೈಪ್- 2 ಹೊಂದಿರುವವರಿಗೆ ಕಿಡ್ನಿ, ಹೃದಯ, ರೆಟಿನಾ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಈ ಸಮಸ್ಯೆಗಳನ್ನು ನಿಯಂತ್ರಿಸಲು ಫಿನೆರಿನೋನ್ ಮಾತ್ರೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಮಧುಮೇಹ ಟೈಪ್- 2 ಇರುವವರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.