ಬಸವಕಲ್ಯಾಣ: ರಾಜ್ಯದಲ್ಲಿ ರಚನೆಯಾಗಲಿರುವ ಹೊಸ ಸರ್ಕಾರದಲ್ಲಿ ಶಾಸಕ ಈಶ್ವರ ಖಂಡ್ರೆ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಪ್ರಾರ್ಥಿಸಿ ನಗರದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಭಾನುವಾರಬಸವಪರ ಸಂಟನೆಯ ಪದಾಧಿಕಾರಿಗಳು ಹಾಗೂ ಪ್ರಮುಖರು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಸವಪರ ಸಂಟನೆ ಪ್ರಮುಖ ಶಿವಕುಮಾರ ಬಿರಾದಾರ್ ಮಾತನಾಡಿ, ದಿ. ವೀರೇಂದ್ರ ಪಾಟೀಲ್ ನಂತರ ರಾಜ್ಯದಲ್ಲಿ ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ದೊರಕಿಲ್ಲ. ಈಗ ಲಿಂಗಾಯತ ಸಮಾಜದ ಆಶಾಕಿರಣ ಆಗಿರುವ ಈಶ್ವರ ಖಂಡ್ರೆ, ಅವರನ್ನು ಉಪಮುಖ್ಯಮಂತ್ರಿ ಸ್ಥಾನ ನೀಡಿದರೆ ಪಕ್ಷದಲ್ಲಿ ನಾಯಕತ್ವ ದೊರಕಿಸಿಕೊಟ್ಟಂತಾಗುತ್ತದೆ ಎಂದು ಹೇಳಿದರು. ತಾಪಂ ಕೆಡಿಪಿ ನಾಮನಿರ್ದೇಶಿಕ ಸದಸ್ಯ ಶಿವಕುಮಾರ ಶಟಗಾರ, ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ಬಿಡಿಪಿಸಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಕುರುಕೋಟೆ, ಕಾರ್ಯದರ್ಶಿ ಅಶೋಕ ನಾಗರಾಳೆ, ಸಹ ಕಾರ್ಯದರ್ಶಿಗಳಾದ ಬಸವರಾಜ ಬಾಲಿಕಿಲೆ, ಸುನೀಲ ರಾಯವಾಡೆ, ನಿರ್ದೇಶಕ ಬಸವರಾಜ ತೊಂಡಾರೆ, ನಾಗಯ್ಯ ಸ್ವಾಮಿ, ಮುಖಂಡರಾದ ಸುನೀಲ ಪಾಟೀಲ್, ಬಸವರಾಜ ಮುರಡೆ, ಸಿದ್ರಾಮ ಕಾಮಣ್ಣ. ಅನಿಲ ಹಲಶೆಟ್ಟೆ, ಮಲ್ಲಿಕಾರ್ಜನ ವಾಂಜರಖೇಡೆ, ಸಂಗಮೇಶ ಬೆಲ್ಲೆ, ವಿವೇಕ ಚಳಕಾಪೂರೆ, ಶಿವು ಕುದರೆ ಇತರರು ಭಾಗವಹಿಸಿದ್ದರು.