ಮಳೆಗಾಗಿ ಬಸವಣ್ಣನಲ್ಲಿ ವಿಶೇಷ ಪೂಜೆ

 ಚಿತ್ತಾಪುರ ತಾಲೂಕಿನ ಸಾತನೂರ ಹೊರವಲಯದಲ್ಲಿರುವ ಚೌಡಮ್ಮ ಬಾವಿ ಹತ್ತಿರದ ಬಸವಣ್ಣನ ಮೂರ್ತಿಗೆ ಶುಕ್ರವಾರ ಸಂಜೆ ಗ್ರಾಮಸ್ಥರು ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥಿಸಿದರು.
ಚಿತ್ತಾಪುರ ತಾಲೂಕಿನ ಸಾತನೂರ ಹೊರವಲಯದಲ್ಲಿರುವ ಚೌಡಮ್ಮ ಬಾವಿ ಹತ್ತಿರದ ಬಸವಣ್ಣನ ಮೂರ್ತಿಗೆ ಶುಕ್ರವಾರ ಸಂಜೆ ಗ್ರಾಮಸ್ಥರು ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಸಾತನೂರ ಗ್ರಾಮದಲ್ಲಿ ರೈತರಿಂದ ನೈವೇದ್ಯ ಸಮರ್ಪಣೆ
  • ದೇವರ ಮುಖ ಪಶ್ಚಿಮಕ್ಕೆ ತಿರುಗಿಸಿ ಪ್ರಾರ್ಥನೆ
ಚಿತ್ತಾಪುರ: ಉತ್ತಮ ಮಳೆಯಾಗಲಿ ಹಾಗೂ ರೈತರ ಬದುಕು ಹಸನಾಗಲಿ ಎಂದು ಪ್ರಾರ್ಥಿಸಿ ರೈತರು ಹಾಗೂ ಸಾರ್ವಜನಿಕರು ಸಾತನೂರ ಗ್ರಾಮದ ಹೊರವಲಯದ ಚೌಡಮ್ಮ ಬಾವಿ ಬಳಿಯ ಬಸವಣ್ಣನ ಮೂರ್ತಿಯ ಮುಖ ತಿರುಗಿಸಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿ ಹಳ್ಳದ ಜಾತ್ರೆ ನಡೆಸಿದರು.
ಗ್ರಾಮದಲ್ಲಿ ಬಸವಣ್ಣ ಪೂರ್ವ ದಿಕ್ಕಿಗೆ ಮುಖ ಮಾಡಿ ಕುಳಿತಿದ್ದ, ಜನರು ನಿತ್ಯವೂ ದರ್ಶನ ಪಡೆಯುತ್ತಾರೆ. ಮಳೆ ಕೊರತೆಯ ವೇಳೆ ಬಸವಣ್ಣನ ಮುಖ ಇನ್ನೊಂದು ದಿಕ್ಕಿಗೆ ತಿರುಗಿಸಿದರೆ ವರ್ಷಧಾರೆ ಆಗುತ್ತದೆ ಎಂಬ ವಾಡಿಕೆಯಿದೆ. ಹೀಗಾಗಿ ಮಾಲಿ ಗೌಡರು, ಪೊಲೀಸ್​ ಗೌಡರ ನೇತೃತ್ವದಲ್ಲಿ ರೈತರೆಲ್ಲ ಸೇರಿ ಪೂರ್ವದಿಂದ ಪಶ್ಚಿಮ ದಿಕ್ಕಿಗೆ ಮುಖವನ್ನು ತಿರುಗಿಸಿ ಮಳೆ ಸುರಿಯಲೆಂದು ಪ್ರಾರ್ಥನೆ ಮಾಡಿದರು.
ವಿವಿಧ ವಾದ್ಯಗಳೊಂದಿಗೆ ಗ್ರಾಮದ ಜನರೆಲ್ಲರೂ ಸೇರಿ ಊರಿನಿಂದ ಬಸವಣ್ಣನಿಗೆ ನೈವೇದ್ಯ ತಂದರು. ಬಳಿಕ ಎಲ್ಲರೂ ವಿಶೇಷ ಪೂಜೆಯೊಂದಿಗೆ ಪ್ರಾರ್ಥನೆ ಮಾಡಿ ನೈವೇದ್ಯ ಸಮರ್ಪಿಸಿದರು. ಬಳಿಕ ಗ್ರಾಮದ ಜನರೆಲ್ಲ ದೇವಸ್ಥಾನದ ಅಕ್ಕ&ಪಕ್ಕದಲ್ಲಿ ಕುಳಿತು ಭೋಜನ ಸವಿದು ಖುಷಿಪಟ್ಟರು.
ಕೇದಾರನಾಥ ಮಾಲಿ ಪಾಟೀಲ್​, ಸಾಹೇಬಗೌಡ ಪೊಲೀಸ್​ ಪಾಟೀಲ್​, ಮಲ್ಲೇಶಪ್ಪ ತೆಂಗಳಿ, ಬಸವರಾಜ ಸ್ವಾಮಿ ಸ್ಥಾವರಮಠ, ಮಲ್ಲೇಶಪ್ಪ ಅವಂಟಿ, ಶಂಭು ಅವಂಟಿ, ಬಸವರಾಜ ದಂಡಗುಂಡ, ಬಸವರಾಜ ಮಾನಶೆಟ್ಟಿ, ಮಹೇಶ ಮುಗುಟಿ, ಶರಣಬಸಪ್ಪ ನೆನೆಕ್ಕಿ, ಬಸವರಾಜ ಗುತ್ತೇದಾರ್​, ದೊಡ್ಡಪ್ಪ ತೆಂಗಳಿ, ಶಂಭುಲಿಂಗಪ್ಪ ಅವಂಟಿ, ಮಲ್ಲಪ್ಪ ದೊಡ್ಮನಿ, ರೇವಣು ಪೂಜಾರಿ, ಇಬ್ರಾಹಿಂ ನಾಯ್ಕೋಡಿ, ಭೀಮರಾಯ ಕೊಂಚೂರ, ರೇವಣ್ಣ ಕದ್ದರಗಿ, ದಶರಥ ಕದ್ದರಗಿ, ಮಲ್ಲಣ್ಣಗೌಡ ಪೊಲೀಸ್​ ಪಾಟೀಲ್​, ಶರಣಬಸಪ್ಪ ಬೊಮ್ಮಣಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net