ಹಿಸ್ಪಾನೆಕ್ಸ್ ಸಂಶೋಧನಾ ಕಾರ್ಯಕ್ರಮವು ಸ್ಪೇನ್ ಸರ್ಕಾರದ ಅತ್ಯಂತ ಪ್ರತಿಷ್ಠಿತ ಹಾಗೂ ಸ್ಪರ್ಧಾತ್ಮಕ ಅಂತಾರಾಷ್ಟ್ರೀಯ ಸಂಶೋಧನಾ ಯೋಜನೆಗಳಲ್ಲಿ ಒಂದಾಗಿದೆ. ವಿಶ್ವದಾದ್ಯಂತ ಸ್ಪ್ಯಾನಿಷ ಭಾಷೆ, ಸಾಹಿತ್ಯ ಮತ್ತು ಹಿಸ್ಪಾನಿಕ್ ಅಧ್ಯಯನ ಉತ್ತೇಜಿಸುವ ಉದ್ದೇಶದಿಂದ ಸಂಶೋಧನೆ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ಈ ಅನುದಾನ ನೀಡಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ವಿಶ್ವದ ವಿವಿಧ ದೇಶಗಳ ಸ್ಪ್ಯಾನಿಷ್ ಭಾಷಾ ವಿದ್ವಾಂಸರಿಂದ ಅರ್ಜಿ ಆಹ್ವಾನಿಸಲಾಗಿತ್ತು. ಆಯ್ಕೆಯಾದ ಕೇವಲ 15 ಸಂಶೋಧನಾ ಯೋಜನೆಗಳಲ್ಲಿ ಡಾ. ಮಂಗಲಂ ಅವರ ಯೋಜನೆಯೂ ಒಂದಾಗಿದ್ದು, ಭಾರತದ ಪರ ಆಯ್ಕೆಯಾದ ಕೇವಲ ಎರಡು ಪ್ರಸ್ತಾವನೆಗಳಲ್ಲಿ ಇದೂ ಒಂದಾಗಿದೆ. ಈ ಸಾಧನೆಯು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಜತೆಗೆ ದೇಶಕ್ಕೂ ಹೆಮ್ಮೆಯ ಸಂಗತಿ. ವಿಶ್ವವಿದ್ಯಾಲಯದ ಶೈಕ್ಷಣಿಕ ಸಾಧನೆಗೆ ಮತ್ತಷ್ಟೂ ಮೆರಗು ತಂದಿದೆ.