ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಚಟುವಟಿಕೆಗಳು ಹಾಗೂ ಬಾಹ್ಯಾಕಾಶ ವಿಜ್ಞಾನದಲ್ಲಿ ವ್ಯಕ್ತಿ ಮಾರ್ಗದರ್ಶನ
ಸಪ್ತಗಿರಿ ಎನ್‌ಪಿಎಸ್ ವಿಶ್ವವಿದ್ಯಾಲಯವು 2024-25ನೇ ಶೈಕ್ಷಣಿಕ ವರ್ಷದ ಬ್ಯಾಚ್‌ನಿಂದಲೇ ಇಸ್ರೋ ಪ್ರಸಾರ ಚಟುವಟಕಿಎಯ ನೊಡಲ್ ಕೇಂದ್ರವಾಗಿ ಗುರುತಿಸಿಕೊಂಡಿದೆ.
ಈ ಸಂಚಾರಿ ಅಭಿಯಾನವು ಬಾಹ್ಯಾಕಾಶ ಅದ್ಭುತಗಳನ್ನು ತೆರೆದಿಡುತ್ತದೆ. ದೇಶಾದ್ಯಂತ ವಿದ್ಯಾರ್ಥಿಗಳು ಮತ್ತು ಸಮುದಾಯಗಳ ಏಳಿಗೆ ತಂದಿದೆ.
ಬೆಂಗಳೂರು: ಯುವ ಮನಸ್ಸುಗಳಲ್ಲಿ ಬಾಹ್ಯಾಕಾಶ ವಿಜ್ಞಾನದ ಬಗ್ಗೆ ಇರುವ ಕುತೂಹಲ ಬಲಗೊಳಿಸುವುದಕ್ಕೆ ‘ಇಸ್ರೋ’ ಸಂಸ್ಥೆಯು ದೇಶಾದ್ಯಂತ ‘ಸ್ಪೇಸ್ ಆನ್ ವ್ಹೀಲ್ಸ್’ ಎಂಬ ಅಭಿಯಾನ ನಡೆಸುತ್ತಿದೆ. ಇದರ ಭಾಗವಾಗಿ ಇತ್ತೀಚೆಗೆ ಸಪ್ತಗಿರಿ ಎನ್‌ಪಿಎಸ್ ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಆೃಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ನೇತೃತ್ವದಲ್ಲಿ ‘ಸ್ಪೇಸ್ ಆನ್ ವ್ಹೀಲ್ಸ್’ ನಡೆಯಿತು.
ಉಪಗ್ರಹ ತಂತ್ರಜ್ಞಾನದ ಇಂಟರ‌್ಯಾಕ್ಟಿವ್ ಪ್ರಾತ್ಯಕ್ಷಿಕೆಗಳು, ಉಡಾವಣೆ ವಾಹನಗಳ ಮಾದರಿಗಳು, ವರ್ಚುವಲ್ ರಿಯಾಲಿಟಿ, ಬಾಹ್ಯಾಕಾಶ ಅನುಭವಗಳು, ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಚಟುವಟಿಕೆಗಳು ಹಾಗೂ ಬಾಹ್ಯಾಕಾಶ ವಿಜ್ಞಾನದಲ್ಲಿ ವ್ಯಕ್ತಿ ಮಾರ್ಗದರ್ಶನ ನೀಡುವುದಾಗಿದೆ.
ನೋಡಲ್ ಕೇಂದ್ರವಾಗಿ ವಿವಿ:
ಸಪ್ತಗಿರಿ ಎನ್‌ಪಿಎಸ್ ವಿಶ್ವವಿದ್ಯಾಲಯವು 2024-25ನೇ ಶೈಕ್ಷಣಿಕ ವರ್ಷದ ಬ್ಯಾಚ್‌ನಿಂದಲೇ ಇಸ್ರೋ ಪ್ರಸಾರ ಚಟುವಟಕಿಎಯ ನೊಡಲ್ ಕೇಂದ್ರವಾಗಿ ಗುರುತಿಸಿಕೊಂಡಿದೆ. ಈ ನೋಡಲ್ ಕೇಂದ್ರದ ಮೂಲಕ ಉಚಿತ ಪ್ರಮಾಣಪತ್ರ ಕೋರ್ಸ್‌ಗಳನ್ನು ಆಯೋಜಿಸಲಾಗುತ್ತಿದೆ. 2026ರ ಜನವರಿಯಲ್ಲಿ ಎನ್‌ಪಿಎಸ್ ವಿವಿಯನ್ನು ನೋಡಲ್ ಕೇಂದ್ರವನ್ನು ಸ್ಟಾರ್ಟ್ (ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಜಾಗೃತಿ ತರಬೇತಿ ಕಾರ್ಯಕ್ರಮ), ಸ್ಟೆಮ್ (ವಿಜ್ಞಾನ, ತಂತ್ರಜ್ಞಾನ ಮತ್ತುಗಣಿತ ಕಾರ್ಯಕ್ರಮ) ಕಾರ್ಯಕ್ರಮಗಳಿಗಾಗಿ ಗುರುತಿಸಲಾಗಿದೆ.
ಈ ಸಂಚಾರಿ ಅಭಿಯಾನವು ಬಾಹ್ಯಾಕಾಶ ಅದ್ಭುತಗಳನ್ನು ತೆರೆದಿಡುತ್ತದೆ. ದೇಶಾದ್ಯಂತ ವಿದ್ಯಾರ್ಥಿಗಳು ಮತ್ತು ಸಮುದಾಯಗಳ ಏಳಿಗೆ ತಂದಿದೆ. ತುಂಬಾ ದೂರದ ಪ್ರದೇಶಗಳಿಗೂ ವಿಜ್ಞಾನವನ್ನು ತಲುಪಿಸುವ ಮಹತ್ಕಾರ್ಯ ಇದಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಬಾಹ್ಯಾಕಾಶ ವಿಜ್ಞಾನದ ಅದ್ಭುತಗಳನ್ನು ದೇಶಾದ್ಯಂತ ಇರುವ ಸಮುದಾಯಗಳಿಗೆ ನೇರವಾಗಿ ತಲುಪಿಸುತ್ತದೆ. ದೂರದ ಗ್ರಾಮೀಣ ಪ್ರದೇಶಗಳು, ಸರ್ಕಾರಿ ಶಾಲೆಗಳು, ಉತ್ತಮ ಸಂಖ್ಯೆಯಲ್ಲಿ ವಿದ್ಯಾರ್ಥಿಗಳ ಹಾಜರಾತಿ ಇರುವ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ತಲುಪಲು ಇದನ್ನು ವಿನ್ಯಾಸಗೊಳಿಸಲಾಗಿದೆ.