ಕಕ್ಕೇರಾ ಪಟ್ಟಣದ ಉಪ ಪೊಲೀಸ್ ಠಾಣೆಗೆ ಮಂಗಳವಾರ ಆಗಮಿಸಿದ್ದ ಎಸ್ಪಿ ಪೃಥ್ವಿಕ್ ಶಂಕರ್ ಅವರನ್ನು ಕೆಪಿಸಿಸಿ ಸದಸ್ಯ ಗುಂಡಪ್ಪ ಸೊಲಾಪುರ, ಪುರಸಭೆ ಅಧ್ಯಕ್ಷ ಪರಮಣ್ಣ ಕಮತಗಿ, ಉಪಾಧ್ಯಕ್ಷ ಜಟ್ಟೆಪ್ಪ ದಳಾರ ಸನ್ಮಾನಿಸಿದರು.
ಪೊಲೀಸ್ ಠಾಣೆ ನಿರ್ಮಾಣಕ್ಕಾಗಿ ಅಧಿಕಾರಿ ಹಾಗೂ ಮುಖಂಡರ ಜತೆ ಚರ್ಚೆ
ಕಕ್ಕೇರಾ: ಕಳೆದ ತಿಂಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2026ರ ಬಜೆಟ್ನಲ್ಲಿ ಕಕ್ಕೇರಾ ಉಪ ಪೊಲೀಸ್ ಠಾಣೆಯನ್ನು ಪೊಲೀಸ್ ಠಾಣೆಯನ್ನಾಗಿ ಮೇಲ್ದರ್ಜೇಗೇರಿಸಿ ಆದೇಶ ಹೊರಡಿಸಿದ್ದರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಉಪ ಪೊಲೀಸ್ ಠಾಣೆಗೆ ಮಂಗಳವಾರ ಭೇಟಿ ನೀಡಿದರು.
ಈ ವೇಳೆ ಗ್ರಾಮಾಡಳಿತಾಧಿಕಾರಿ ಬಸವರಾಜ ಶೆಟ್ಟಿ ಹಾಗೂ ಕೆಪಿಸಿಸಿ ಸದಸ್ಯ ಗುಂಡಪ್ಪ ಸೊಲಾಪುರ, ಪುರಸಭೆ ಅಧ್ಯಕ್ಷ ಪರಮಣ್ಣ ಕಮತಗಿ, ಉಪಾಧ್ಯಕ್ಷ ಜಟ್ಟೆಪ್ಪ ದಳಾರ ಮತ್ತು ಮುಖಂಡರ ಜತೆ ನೂತನ ಪೊಲೀಸ್ ಠಾಣೆ ನಿರ್ಮಾಣಕ್ಕಾಗಿ ಸ್ಥಳದ ಕುರಿತು ಚರ್ಚಿಸಿದರು.
ನಂತರ ಮಾತನಾಡಿದ ಅವರು, ಪಟ್ಟಣದಲ್ಲಿರುವ ಪ್ರಸ್ತುತ ಉಪ ಪೊಲೀಸ್ ಠಾಣೆಯು ಪೊಲೀಸ್ ಠಾಣೆಯನ್ನಾಗಿ ಸರ್ಕಾರ ಮೇಲ್ದರ್ಜೇಗೇರಿಸಿ ಆದೇಶ ಹೊರಡಿಸಿದ್ದು ಪೂರ್ಣ ಪ್ರಮಾಣದ ಪೊಲೀಸ್ ಠಾಣೆಯನ್ನಾಗಿಸುವ ಕುರಿತು ಹೊಸ ಕಟ್ಟಡ ನಿರ್ಮಾಣಕ್ಕಾಗಿ 1 ಎಕರೆ ಮತ್ತು ಪೊಲೀಸ್ ವಸತಿ ಗೃಹಗಳ ನಿರ್ಮಾಣಕ್ಕಾಗಿ ಜಾಗದ ಕುರಿತಾಗಿ ಕಂದಾಯ, ಪುರಸಭೆ ಆಡಳಿತ ಮಂಡಳಿ ಮತ್ತು ಮುಖಂಡರಿಂದ ಮಾಹಿತಿ ಪಡೆಯಲಾಗಿದೆ ಎಂದು ಹೇಳಿದರು.
ಹುಣಸಗಿ ವೃತ್ತ ಸಿಪಿಐ ರವಿಕುಮಾರ ಎಸ್.ಎನ್, ಕೊಡೇಕಲ್ ಠಾಣಾಧಿಕಾರಿ ರಾಜಶೇಖರ ರಾಠೋಡ್, ಸಿಬ್ಬಂದಿ ಬೀರಪ್ಪ, ರಾಜು, ವಿನಾಯಕ ಹಾಗೂ ಪ್ರಮುಖರಾದ ಕೆಪಿಸಿಸಿ ಸದಸ್ಯ ಗುಂಡಪ್ಪ ಸೊಲಾಪುರ, ಪುರಸಭೆ ಅಧ್ಯಕ್ಷ ಪರಮಣ್ಣ ಕಮತಗಿ, ಉಪಾಧ್ಯಕ್ಷ ಜಟ್ಟೆಪ್ಪ ದಳಾರ, ದ್ಯಾವಪ್ಪ ಜಂಪಾ, ಬಸವರಾಜ ಇತರರಿದ್ದರು.