ಮಹಾರಾಜವಾಡಿಯಲ್ಲಿ ನೀರಿನ ಸಮಸ್ಯೆ ಬಗೆಹರಿಸಿ

ರಾದ್​ ತಾಲೂಕಿನ ಮಹಾರಾಜವಾಡಿ ಗ್ರಾಮದಲ್ಲಿ ಸರ್ಕಾರಿ ಭೂಮಿಯಲ್ಲಿ ಕೊಳವೆ ಬಾವಿ ತೆಗೆದು ಜನರಿಗೆ ನೀರಿನ ಸಮಸ್ಯೆ ಬಗೆಹರಿಸುವಂತೆ ಗ್ರಾಮಸ್ಥರು ತಹಸೀಲ್ದಾರ್​ ಅವರಿಗೆ ಬರೆದ ಮನವಿಪತ್ರವನ್ನು ಪಿಡಿಒ ದಿನೇಶ ರಡ್ಡಿ ಅವರಿಗೆ ಸಲ್ಲಿಸಿದರು. ಸಂದೀಪ ಪಾಟೀಲ್​, ತುಕಾರಾಮ ಬಿರಾದಾರ, ಗೋಪಾಳರಾವ ಬಿರಾದಾರ, ನಾಗನಾಥ ನಿಟ್ಟೂರೆ, ಶಾಂತಪ್ಪ ಅಮಲಾಪುರೆ, ನಾಗಗೊಂಡ ಮೇತ್ರೆ, ಬಸವರಾಜ, ಮಲ್ಲಪ್ಪ ಮೇತ್ರೆ, ಮಕ್ಸೂದ್​, ಬಾಲಾಜಿ ನಿಟ್ಟೂರೆ, ಧನರಾಜ ಮಾಲೇಕರ್​ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಗ್ರಾಮಸ್ಥರಿಂದ ಮನವಿಪತ್ರ ಸಲ್ಲಿಕೆ
ಔರಾದ್​: ಮಹಾರಾಜವಾಡಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದ್ದು, ಹೊಸ ಕೊಳವೆ ಬಾವಿ ಕೊರೆಸಲು ಅಧಿಕಾರಿಗಳು ಮುಂದಾಗಾ ಗ್ರಾಮದ ಕೆಲ ಪ್ರಭಾವಿ ವ್ಯಕ್ತಿಗಳು ಅಡ್ಡಿಪಡಿಸುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಗ್ರಾಮದಲ್ಲಿ ನೀರಿನ ಕೊರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಸೂಚಿಸಿದ ಸ್ಥಳದಲ್ಲಿ ಬೋರವೆಲ್​ ಕೊರೆಸಲು ಅವಕಾಶ ನೀಡದೆ ಈ ಜಾಗ ನಮ್ಮದು ಎಂದು ಕೆಲವರು ತಕರಾರು ಮಾಡುತ್ತಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ. ಇದರಿಂದ ಸಮಸ್ಯೆ ಮತ್ತಷ್ಟು ತೀವ್ರಗೊಂಡಿದ್ದು, ಸಾರ್ವಜನಿಕರಿಗೆ ಕುಡಿಯುವ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಸೊರಳ್ಳಿ ರಸ್ತೆಯ ಸರ್ಕಾರಿ ಭೂಮಿಯಲ್ಲಿ ಸರ್ವೇ ನಡೆಸಿ ಸೂಕ್ತ ಸ್ಥಳ ಗುರುತಿಸಲು ಸಂಬಂಧಿತ ಅಧಿಕಾರಿಗಳು ತಕ್ಷಣ ಕ್ರಮಕೈಗೊಳ್ಳಬೇಕೆಂದು ಪಿಡಿಒ ಮುಖಾಂತರ ತಹಸೀಲ್ದಾರ್​ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಸಂದೀಪ್​ ಪಾಟೀಲ್​, ತುಕಾರಾಮ್​ ಬಿರಾದಾರ, ಗೋಪಾಳರಾವ್​ ಬಿರಾದಾರ, ನಾಗನಾಥ್​ ನಿಟ್ಟೂರೆ, ಶಾಂತಪ್ಪ ಅಮಲಾಪುರೆ, ನಾಗಗೊಂಡ್​ ಮೇತ್ರೆ, ಬಸವರಾಜ, ಮಲ್ಲಪ್ಪ ಮೇತ್ರೆ, ಮಕ್ಸೂದ್​, ಬಾಲಾಜಿ ನಿಟ್ಟೂರೆ, ಧನರಾಜ ಮಾಲೇಕರ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net