ವಿದ್ಯುತ್​ ಸಮಸ್ಯೆ ಶೀಘ್ರ ಪರಿಹರಿಸಿ

ಕೆಂಭಾವಿ ಪಟ್ಟಣದ ವಾರ್ಡ್​ 3ರಲ್ಲಿ ವಿದ್ಯುತ್​ ಪದೇಪದೆ ಕಾಡುತ್ತಿದ್ದು, ಕೂಡಲೇ ಈ ಸಮಸ್ಯೆ ನೀಗಿಸಿ ನಿವಾಸಿಗಳಿಗೆ ಸಮಸ್ಯೆ ಪರಿಹರಿಸುವಂತೆ ಪುರಸಭೆ ಸದಸ್ಯ ರವಿ ಸೊನ್ನದ ಜೆಸ್ಕಾಂ ಎಇಇ ರಾಜಶೇಖರ ಪಾಟೀಲ್​ ಅವರಿಗೆ ಮನವಿ ಸಲ್ಲಿಸಿದರು. ಆರ್​ೀ ಹುಸೇನ್​ ಖಾಜಿ ಇದ್ದರು.

Published on
ಕೆಂಭಾವಿ: ಪಟ್ಟಣದ ವಾರ್ಡ್​ 3ರಲ್ಲಿ ವಿದ್ಯುತ್​ ಸಮಸ್ಯೆ ತೀವ್ರವಾಗಿದ್ದು, ಕೂಡಲೇ ಈ ಸಮಸ್ಯೆಯನ್ನು ಪರಿಹರಿಸುವಂತೆ ಪುರಸಭೆ ಸದಸ್ಯ ರವಿ ಸೊನ್ನದ ಆಗ್ರಹಿಸಿದ್ದಾರೆ.
ಗುರುವಾರ ಈ ಕುರಿತು ಜೆಸ್ಕಾಂ ಎಇಇ ರಾಜಶೇಖರ ಪಾಟೀಲ್​ ಅವರಿಗೆ ಮನವಿ ಸಲ್ಲಿಸಿದ ಅವರು, ವಾರ್ಡ್​ನಲ್ಲಿ ಈಗಿರುವ 63ಕೆವಿ ಟಿಸಿಯಿಂದ ವಿದ್ಯುತ್​ ಸಮಸ್ಯೆ ತಲೆದೋರುತ್ತಿದ್ದು ಮಳೆ ಗಾಳಿಗೆ ಮೇಲಿಂದ ಮೇಲೆ ಲೋಡ್​ ಹೆಚ್ಚಾಗಿ ಟಿಸಿ ಸುಡುತ್ತಿದೆ. ಈ ವಾರ್ಡ್​ಗಳ ಕಡೆಯ ಮನೆಗಳಿಗೆ ಸರಿಯಾದ ವಿದ್ಯುತ್​ ಸರಬರಾಜಗಾದೆ ಚಜನತೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಕೂಡಲೇ ಈಗಿರುವ 63 ಕೆವಿ ಟಿಸಿ ಬದಲಾಯಿಸಿ 100 ಕೆವಿ ಟಿಸಿ ಅಳವಡಿಸಬೇಕು. ಮತ್ತು ಕೊನೆಯ ಹಂತದ ಮನೆಗಳಿಗೆ ಯಾವುದೇ ಸಮಸ್ಯೆ ಇಲ್ಲದೆ ವಿದ್ಯುತ್​ ತಲುಪಬೇಕಾದರೆ ವಿದ್ಯುತ್​ ಕಂಬಗಳ ಅಗತ್ಯವಿದ್ದು, ಕೂಡಲೇ ಐದು ಕಂಬಗಳನ್ನು ಇಲಾಖೆಯಿಂದ ಅಳವಡಿಸಬೇಕು ಎಂದು ಅವರು ಕೋರಿದ್ದಾರೆ. ಪುರಸಭೆ ಸದಸ್ಯ ಆರೀಫ್​ ಹುಸೇನ್​ ಖಾಜಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net