

ಪ್ರಮುಖ ಮುಖ್ಯಾಂಶಗಳು
ಸರ್ಕಾರಿ ಆಸ್ಪತ್ರೆಗಳಲ್ಲಿ ನಿರಂತ ವಿದ್ಯುತ್ ಸೌಲಭ್ಯ ಕಲ್ಪಿಸಲು 5 ಸಾವಿರ ಆರೋಗ್ಯ ಕೇಂದ್ರಗಳಲ್ಲಿ ಸೌರ ವಿದ್ಯುತ್ ಘಟಕ ಅಳವಡಿಕೆಗೆ ಗುರಿಯೊಂದಿಗೆ ಕಳೆದ ವರ್ಷ ಯೋಜನೆಗೆ ಚಾಲನೆ ನೀಡಲಾಗಿದೆ. ನಿಗದಿತ ಗುರಿಯಂತೆ ಈಗಾಗಲೇ 3,600 ಆಸ್ಪತ್ರೆಗಳಲ್ಲಿ ಅಳವಡಿಕೆ ಮಾಡಲಾಗಿದ್ದು, ಇದರಿಂದ ಉಳಿತಾಯವಾಗುವ ವಿದ್ಯುತ್ ಪಾವತಿ ವೆಚ್ಚವನ್ನು ಆಸ್ಪತ್ರೆಗಳ ನಿರ್ವಹಣೆ ಹಾಗೂ ಸೌಲಭ್ಯಗಳಿಗೆ ಬಳಕೆ ಮಾಡಲಾಗುವುದು.
ಎನ್‌ಎಚ್‌ಎಂ ಹಾಗೂ ಸೆಲ್ಕೋ ಫೌಂಡೇಷನ್ ಸಹಯೋಗದಲ್ಲಿ ರಾಜ್ಯ ಸರ್ಕಾರಿ ಆಸ್ಪತ್ರೆಗಳಿಗೆ ಸೌರ ಘಟಕ ಅಳವಡಿಕೆ ಯೋಜನೆ ವಿದ್ಯುತ್ ವೆಚ್ಚ ತಗ್ಗಿಸುವುದರ ಜತೆಗೆ ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸಿ ಪರಿಸರ ರಕ್ಷಣೆಗೆ ನರವಾಗಲಿದೆ. ಸಮರ್ಥ ಸಾರ್ವಜನಿಕ ಆರೋಗ್ಯ ಸೌಲಭ್ಯ ಹಾಗೂ ಸೇವೆಯನ್ನು ಬಲಪಡಿಸಲಿದೆ.