ಗುಂಡೇನಟ್ಟಿ ಗ್ರಾಮದಲ್ಲಿ ನಡೆದ ಸೆಣಬು ಬೆಳೆ ೇತ್ರೋತ್ಸವದಲ್ಲಿ ರೈತ ಡಾ.ಶಂಕರ ಲಂಗಟಿ ಸೆಣಬು ಬೆಳೆಯ ಕುರಿತು ಮಾತನಾಡಿದರು. ಎಚ್.ಡಿ.ಕೋಳೇಕರ, ಮಂಜುನಾಥ ಕಳಸನ್ನವರ, ಸಿ.ಐ.ಹೂಗಾರ, ಜಿ.ಬಿ.ವಿಶ್ವನಾಥ ಇತರರಿದ್ದರು.
ರೈತರು ಸ್ವಾವಲಂಬನೆ ಕೃಷಿಗೆ ಆದ್ಯತೆ ನೀಡುವ ಮೂಲಕ ಆರ್ಥಿಕವಾಗಿ ಸಬಲರಾಗಿ ಎಂದು ಬೆಳಗಾವಿ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಎಚ್.ಡಿ.ಕೋಳೇಕರ ಹೇಳಿದರು.
ಸಮೀಪದ ಗುಂಡೇನಟ್ಟಿ ಗ್ರಾಮದ ಪ್ರಗತಿಪರ ರೈತ ಡಾ.ಶಂಕರ ಲಂಗಟಿ ಇವರ ತೋಟದಲ್ಲಿ ಧಾರವಾಡದ ಕೃಷಿ ವಿಶ್ವವಿದ್ಯಾಲಯ, ಕೃಷಿ ಇಲಾಖೆ, ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರ ಮತ್ತಿಕೊಪ್ಪ ಹಾಗೂ ಗ್ರಾಮ ಕೃಷಿ ವಿದ್ಯಾ ಅಭಿವೃದ್ಧಿ ಸಂ ಗುಂಡೇನಟ್ಟಿ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸೆಣಬು ಬೆಳೆ ೇತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ,
ರೈತರು ಸಾವಯವ ಕೃಷಿ ರೂಢಿಸಿಕೊಳ್ಳುವ ಮೂಲಕ ಮಣ್ಣಿನ ಆರೋಗ್ಯ ಕಾಪಾಡಬೇಕು ಎಂದರು.
ಸಹಾಯಕ ಕೃಷಿ ನಿರ್ದೇಶಕ ಸಿ.ಐ.ಹೂಗಾರ ಮಾತನಾಡಿ, ಪೋಷಕಾಂಶ ಹೊಂದಿದ ಗೊಬ್ಬರ ಬಳಸಲು ಮಣ್ಣು ಪರೀೆ ಅವಶ್ಯವಾಗಿದ್ದು ವೈವಿಧ್ಯಮಯ ಬೆಳೆಗಳನ್ನು ಕೃಷಿಯಲ್ಲಿ ರೂಢಿಸಿಕೊಳ್ಳಬೇಕು ಎಂದರು.
ಪ್ರಗತಿ ಪರ ರೈತ ಡಾ.ಶಂಕರ ಲಂಗಟಿ ಸೆಣಬು ಬೆಳೆಯ ಕುರಿತು ರೈತರೊಂದಿಗೆ ಮಾಹಿತಿ ಹಂಚಿಕೊಂಡರು. ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಜಿ.ಬಿ.ವಿಶ್ವನಾಥ ಮಾತನಾಡಿದರು. ಮಂಜುನಾಥ ಕಳಸನ್ನವರ, ಶಂಕರ ತೇಗೂರ, ಚನ್ನಬಸು ಕಿಲಾರಿ, ಗುರುಸಿದ್ದ ಭರಮನ್ನವರ, ಶಶಿಧರ ಕುರಗುಂದ, ಶಿವಾನಂದ ಲಂಗಟಿ,