ಹಾರೋಹಳ್ಳಿ ಪಟ್ಟಣದಲ್ಲಿ ಕಸ್ತೂರಿ ಕರ್ನಾಟಕ ರಕ್ಷಣಾ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಇನ್‌ಸ್ಪೆಕ್ಟರ್ ಮಲ್ಲೇಶ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಆಂಜಿನಪ್ಪ, ಮಂಜುನಾಥ್, ಸೋಮಶೇಖರ್, ರವಿಗಬ್ಬಾಡಿ ಇತರರು ಇದ್ದರು.
: ತಮಿಳುನಾಡಿಗೆ ಕಾವೇರಿ ನೀರು ಹರಿಸಲು ನೀಡಿರುವ ತೀರ್ಪಿನ ವಿರುದ್ಧ ಕನ್ನಡಪರ ಸಂಘಟನೆಗಳು ನೀಡಿದ್ದ ಬಂದ್‌ಗೆ ಪಟ್ಟಣದಲ್ಲಿ ಕಸ್ತೂರಿ ಕರ್ನಾಟಕ ರಕ್ಷಣಾ ಸೇನೆ ಬೆಂಬಲ ಸೂಚಿಸಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಟ್ಟಣದ ಬಸ್ ನಿಲ್ದಾಣದ ವೃತ್ತದಿಂದ ಜಾಥಾ ಹೋರಾಟ ಕಾರ್ಯಕರ್ತರು ಕುಂಬಾ ಶೆಟ್ ಬಳಸಿಕೊಂಡು ಮತ್ತೆ ಬಸ್ ನಿಲ್ದಾಣದ ವೃತ್ತದಲ್ಲಿ ಜಮಾಯಿಸಿ ತಮಿಳುನಾಡು ವಿರುದ್ಧ ಘೋಷಣೆ ಕೂಗಿದರು.
ಕಸ್ತೂರಿ ಕರ್ನಾಟಕ ಸೇನೆ ಅಧ್ಯಕ್ಷ ಅಂಜಿನಪ್ಪ ಮಾತನಾಡಿ, ಡಿ.ಕೆ ಶಿವಕುಮಾರ್ ತಮಿಳುನಾಡಿಗೆ ನೀರು ಹರಿಸದಿರುವಂತೆ ಸುಗ್ರೀವಾಜ್ಞೆ ಜಾರಿ ಮಾಡಬೇಕೆಂದು ಒತ್ತಾಯಿಸಿದರು.
ಕಸ್ತೂರಿ ಕರ್ನಾಟಕ ರಕ್ಷಣಾ ಸೇನೆಯ ಪದಾಧಿಕಾರಿಗಳಾದ ಮಂಜುನಾಥ್. ಪಿ, ರಾಮಚಂದ್ರ, ಸೋಮಶೇಖರ್, ರವಿಗಬ್ಬಾದಿ, ಪ್ರಕಾಶ್, ವೆಂಕಟೇಶ್, ಶಿವು, ಜಗದೀಶ್, ನಾಗೇಶ್, ಚಂದ್ರಣ್ಣ, ಇಮ್ರಾನ್, ನೌಶಾದ್, ಸಲೀಂ, ಆಟೋ ದೀಪು, ಕುಮಾರ್, ಕೈಸರ್ ಪಾಷಾ, ಭೈರಾಜುಗೌಡ, ಕುಮಾರ್ ಇತರರು ಇದ್ದರು.