ವಿದ್ಯಾರ್ಥಿಗಳು 9 ಗಂಟೆಗೆ ತರಗತಿಗೆ ಬಂದು ಪರೀಕ್ಷೆ ಬರೆಯಲು 11 ಗಂಟೆ ತನಕ ಕಾಯಬೇಕು, ಜತೆಗೆ ಪರೀಕ್ಷೆ ಮುಕ್ತಾಯಗೊಳ್ಳುವಾಗ ಮಧ್ಯಾಹ್ನ 2.15 ಆಗಲಿದ್ದು, ವಿದ್ಯಾರ್ಥಿಗಳ ಭೋಜನಕ್ಕೂ ತಡವಾಗಲಿದೆ. ಆದ್ದರಿಂದ ಪರೀಕ್ಷೆಯನ್ನು 10.30ಕ್ಕೆ ಆರಂಭಿಸಿದರೆ ಸೂಕ್ತ ಎಂಬ ಅಭಿಪ್ರಾಯ ಇಲಾಖೆಯಲ್ಲಿ ಬಂದ ಹಿನ್ನೆಲೆಯಲ್ಲಿ ಪರೀಕ್ಷೆ ಆರಂಭದ ಅವಧಿಯನ್ನು ಪರಿಷ್ಕರಿಸಲಾಗಿದೆ ಎಂದು ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.