ಎಸ್​ಐಆರ್​ ಮನೆ ಮನೆಗೆ ತೆರಳಿಯೇ ಮಾಡಿ

ಯಾದಗಿರಿಯ ತಮ್ಮ ನಿವಾಸದಲ್ಲಿ ಶನಿವಾರ ಶಾಸಕ ಚನ್ನಾರಡ್ಡಿ ಪಾಟೀಲ್​ ಅವರು ಮತದಾರರ ಅರ್ಜಿ ತುಂಬಿ ಅಧಿಕಾರಿಗಳಿಗೆ ನೀಡಿದರು. ಎಸಿ ಶ್ರೀಧರ ಗೋಟೂರ, ತಹಸಿಲ್ದಾರ್​ ಸುರೇಶ ಅಂಕಲಗಿ, ತುನ್ನೂರ ಕುಟುಂಬದ ಸದಸ್ಯರಿದ್ದರು.
ಯಾದಗಿರಿಯ ತಮ್ಮ ನಿವಾಸದಲ್ಲಿ ಶನಿವಾರ ಶಾಸಕ ಚನ್ನಾರಡ್ಡಿ ಪಾಟೀಲ್​ ಅವರು ಮತದಾರರ ಅರ್ಜಿ ತುಂಬಿ ಅಧಿಕಾರಿಗಳಿಗೆ ನೀಡಿದರು. ಎಸಿ ಶ್ರೀಧರ ಗೋಟೂರ, ತಹಸಿಲ್ದಾರ್​ ಸುರೇಶ ಅಂಕಲಗಿ, ತುನ್ನೂರ ಕುಟುಂಬದ ಸದಸ್ಯರಿದ್ದರು.
Published on
ಯಾದಗಿರಿ: ಎಸ್​ಐಆರ್​ ಕೆಲಸ ಮನೆ, ಮನೆಗೆ ತೆರಳಿಯೇ ಮಾಡಬೇಕು. ಇದರ ಹೊರತು ಗುಡಿ, ಗುಂಡಾ ಮತ್ತು ಇತರೇ ಸ್ಥಳಗಳಲ್ಲಿ ಮಾಡಬೇಡಿ ಎಂದು ಶಾಸಕ ಚನ್ನಾರಡ್ಡಿ ಪಾಟೀಲ್​ ತುನ್ನೂರ ಹೇಳಿದರು.
ಶನಿವಾರ ಅವರ ಮನೆಗೆ ಭೇಟಿ ನೀಡಿದ ಅಧಿಕಾರಿ ತಂಡದ ಸಮ್ಮುಖದಲ್ಲಿ ಶಾಸಕರು ತಾವು ಸೇರಿ ತಮ್ಮ ಕುಟುಂಬ ಸದಸ್ಯರ ಎಸ್​ಐಆರ್​ ಅರ್ಜಿ ತುಂಬಿ ನೀಡಿದ ನಂತರ ಮಾತನಾಡಿದರು. ಈಗಾಗಲೇ ಕೆಲವು ಕಡೆ ನಿಯಮ ಉಲ್ಲಂಸಿ ಎಲ್ಲೆಂದರಲ್ಲಯೇ ಅರ್ಜಿಗಳನ್ನು ಸಾಮೂಹಿಕವಾಗಿ ತುಂಬಿಸಿಕೊಳ್ಳುವ ಕುರಿತು ವರದಿಯಾಗಿದೆ. ನಗರ ಸೇರಿದಂತೆಯೇ ಜಿಲ್ಲೆಯಲ್ಲಿ ಇದಕ್ಕೆ ಅವಕಾಶ ನೀಡಬೇಡಿ ಎಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ಸಹಾಯಕ ಆಯುಕ್ತ ಶ್ರೀಧರ ಗೋಟೂರ, ತಹಸೀಲ್ದಾರ್​ ಸುರೇಶ ಅಂಕಲಗಿ, ಶಾಸಕರ ಧರ್ಮಪತ್ನಿ, ಕುಟುಂಬದ ಸದಸ್ಯರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net