ಪ್ರಜಾಪ್ರಭುತ್ವ ಉಳಿವಿಗೆ ಎಸ್​ಐಆರ್​ ಅವಶ್ಯ

ಚಿಂಚೋಳಿ ಮತಕ್ಷೇತ್ರದ ರಟಕಲ್​ ಗ್ರಾಮದಲ್ಲಿ ಎಸ್​ಐಆರ್​ ಪ್ರಕ್ರಿಯೆ ಕುರಿತು ಶಾಸಕ ಡಾ.ಅವಿನಾಶ ಜಾಧವ್​ ಜಾಗೃತಿ ಮೂಡಿಸಿದರು. ಡಾ. ರೇವಣಸಿದ್ದಪ್ಪ, ಶ್ರೀಕಾಂತ ತಾಂಡೂರ, ಹಣಮಂತರಾವ ಆಡಕಿ, ಜಗನ್ನಾಥ ಮಗಿ ಇತರರಿದ್ದರು.
ಚಿಂಚೋಳಿ ಮತಕ್ಷೇತ್ರದ ರಟಕಲ್​ ಗ್ರಾಮದಲ್ಲಿ ಎಸ್​ಐಆರ್​ ಪ್ರಕ್ರಿಯೆ ಕುರಿತು ಶಾಸಕ ಡಾ.ಅವಿನಾಶ ಜಾಧವ್​ ಜಾಗೃತಿ ಮೂಡಿಸಿದರು. ಡಾ. ರೇವಣಸಿದ್ದಪ್ಪ, ಶ್ರೀಕಾಂತ ತಾಂಡೂರ, ಹಣಮಂತರಾವ ಆಡಕಿ, ಜಗನ್ನಾಥ ಮಗಿ ಇತರರಿದ್ದರು.
Published on
ಚಿಂಚೋಳಿ: ಶುದ್ಧ ಮತ್ತು ನಿಖರ ಮತದಾರರ ಪಟ್ಟಿಯಿಂದ ಮಾತ್ರ ಪ್ರಜಾಪ್ರಭುತ್ವದ ಉಳಿವು ಸಾಧ್ಯ ಎಂದು ಶಾಸಕ ಡಾ.ಅವಿನಾಶ ಜಾಧವ್​ ಹೇಳಿದರು. ಮತೇತ್ರದ ರಟಕಲ್​, ಟೆಂಗಳಿ, ಕಾಳಗಿ, ಜಂಬಗಿ, ಕೋಡ್ಲಿ ಸೇರಿ ವಿವಿಧ ಗ್ರಾಮಗಳಿಗೆ ಶನಿವಾರ ಭೇಟಿ ನೀಡಿ ವಿಶೇಷ ತೀವ್ರ ಪರಿಷ್ಕರಣೆ (ಎಸ್​ಐಆರ್​) ಕುರಿತು ಜಾಗೃತಿ ಮೂಡಿಸಿದ ಅವರು, ಎಸ್​ಐಆರ್​ ಪ್ರಕ್ರಿಯೆ ಎಲ್ಲೆಡೆ ನಡೆಯುತ್ತಿದ್ದು, ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಪರಿಶೀಲಿಸಬೇಕು. ತಿದ್ದುಪಡಿಗಳಿದ್ದಲ್ಲಿ ಮಾಡಿಸಿಕೊಳ್ಳಬೇಕು. ಎಸ್​ಐಆರ್​ ಪ್ರಕ್ರಿಯೆಯಲ್ಲಿ ಭಾಗವಹಿಸಿ ಪ್ರಜಾಪ್ರಭುತ್ವ ಬಲಪಡಿಸೋಣ ಎಂದು ಕರೆಕೊಟ್ಟರು. ಡಾ.ರೇವಣಸಿದ್ದಪ್ಪ, ಶ್ರೀಕಾಂತ ತಾಂಡೂರ, ಹಣಮಂತರಾವ ಆಡಕಿ, ಜಗನ್ನಾಥ ಮಗಿ, ಬಸವರಾಜ ಕರಕಮುಕಲಿ, ಪ್ರಶಾಂತ ಕದಂ, ರಮೇಶ ನಾಲವಾಡೆ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net