ಬಿಜೆಪಿಯಿಂದ ಎಸ್‌ಐಆರ್ ಹೆಲ್ಪ್‌ಲೈನ್

ಬಿಜೆಪಿ ಸಹಾಯವಾಣಿ
ಬಿಜೆಪಿ ಸಹಾಯವಾಣಿ
Published on
ಬೆಂಗಳೂರು: ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಸಂಬಂಧ ಗೊಂದಲ ಅಥವಾ ಅಕ್ರಮಗಳ ಮೇಲೆ ನಿಗಾವಹಿಸಲು ಬಿಜೆಪಿ ಸಹಾಯವಾಣಿ ಶುರು ಮಾಡಿದೆ.
ಕಾಂಗ್ರೆಸ್ ಸರ್ಕಾರದ ಸೂಚನೆಯಂತೆ ಕೆಲ ಬಿಎಲ್‌ಒಗಳು ಗುಂಪು ಗುಂಪಾಗಿ ಮತದಾರರಿಗೆ ಎನ್ಯುಮರೇಷನ್ ಾರಂಗಳನ್ನು ವಿತರಣೆ ಮಾಡುತ್ತಿದ್ದಾರೆ. ಮನೆ ಮನೆಗೆ ಭೇಟಿ ಕೊಡುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಈ ಕುರಿತು ಕೇಂದ್ರ ಮುಖ್ಯ ಚುನಾವಣಾ ಆಯೋಗಕ್ಕೂ ಬಿಜೆಪಿ ಮುಖಂಡರು ಸಾಕ್ಷ್ಯ ಸಮೇತ ದೂರು ಸಲ್ಲಿಸಿದ್ದಾರೆ.
ಇದೀಗ ಎಸ್‌ಐಆರ್ ಮುಗಿಯುವವರೆಗೂ ಅದರ ಮೇಲೆ ನಿಗಾವಹಿಸಲು ಬಿಜೆಪಿ ಹೆಲ್ಪ್‌ಲೈನ್ ಶುರು ಮಾಡಿದೆ. ರಾಜ್ಯದಲ್ಲಿ ಅಕ್ರಮ ನಡೆದರೆ ತಕ್ಷಣ 88843 95123 ಸಂಖ್ಯೆಗೆ ಕರೆ ಮಾಡಿ ವಿಡಿಯೋ ಅಥವಾ ೆಟೋಗಳನ್ನು ಕಳುಹಿಸುವಂತೆ ಕೋರಿದೆ.
ಇದಲ್ಲದೆ, ಎನ್ಯುಮರೇಷನ್ ಾರಂಗಳನ್ನು ಭರ್ತಿ ಮಾಡಲು ಗೊಂದಲ ಇದ್ದರೆ ಇನ್ನೂ ಾರಂ ನಿಮ್ಮ ಕೈಗೆ ಸೇರದಿದ್ದರೆ ಮತ್ಯಾವುದೇ ಎಸ್‌ಐಆರ್ ಸಮಸ್ಯೆ ಇದ್ದರೂ ಕರೆ ಮಾಡಬಹುದು. ಅರ್ಜಿ ಭರ್ತಿ ಮಾಡಲು ಗೊಂದಲ ಇದ್ದರೆ ಮಾರ್ಗದರ್ಶನ ನೀಡಲಿದ್ದಾರೆ ಅಥವಾ ಸಂಬಂಧಪಟ್ಟ ಬಿಎಲ್‌ಒ ಅಥವಾ ಬಿಎಲ್‌ಎಗಳ ಸಂಪರ್ಕ ಕಲ್ಪಿಸಲು ಸಹಾಯ ಮಾಡಲು ಮುಂದಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net