ಬಾಗಲಕೋಟೆ: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಸಂಬಧಿಸಿದ0ತೆ ಬಿಜೆಪಿ ಹಿರಿಯ ನಾಯಕ, ಸಂಸದ ಗೋವಿಂದ ಕಾರಜೋಳ ಅವರು, ಸಿದ್ದರಾಮಯ್ಯ ಮುಂದಿನ ಪಂದ್ರಹ ದಿನ್ ಕಾ ಸುಲ್ತಾನ್ ಮಾತ್ರ ಎಂದು ಭವಿಷ್ಯ ನುಡಿದಿದ್ದಾರೆ.
ಬಾಗಲಕೋಟೆ ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯನವರ ೧೫ ದಿನಗಳ ಸರದಾರ. ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ದಿನವೇ ಸಿದ್ಧರಾಮಯ್ಯ ಅವರು ಕುರ್ಚಿ ಫಲಿತಾಂಶ ಪ್ರಕಟ ಎಂದರು.
ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರದಲ್ಲಿ ಕುರ್ಚಿ ಕಿತ್ತಾಟದಿಂದಾಗಿ ವಿಧಾನಸೌಧದಲ್ಲಿ ಆಡಳಿತವೇ ಇಲ್ಲವಾಗಿದೆ. ಮೇ ೪ ರಂದು ಐದು ರಾಜ್ಯಗಳ ಚುನಾವಣೆ ಫಲಿತಾಂಶ ಬರುತ್ತದೆ. ಅಂದು ರಾಜ್ಯದ ಡಾವಣಗೇರಿ ಮತ್ತು ಬಾಗಲಕೋಟೆ ಫಲಿತಾಂಶ ಕೂಡ ಬರುತ್ತದೆ. ಅದರ ಜೊತೆಗೆ ಸಿದ್ದರಾಮಯ್ಯ ಅವರ ಕುರ್ಚಿಯ -Àಲಿತಾಂಶ ಕೂಡ ಪ್ರಕಟವಾಗುತ್ತದೆ ಎಂದು ಹೇಳಿದರು.
ಸದ್ಯದ ಮಾಹಿತಿ ಪ್ರಕಾರ ಡಿ.ಕೆ.ಶಿವಕುಮಾರ ಸಿಎಂ ಆಗಲು ಶಾಲು ಹೊತ್ತುಕೊಂಡು ಕೂತಿದ್ದಾರೆ. ಸಿದ್ಧರಾಮಯ್ಯ ಅವರ ೪೦ ಜನ ಶಾಸಕರು, ಡಿ.ಕೆ.ಶಿವಕುಮಾರ ಪರವಾಗಿ ೫೦ ಜನ ಶಾಸಕರು ಹೈಕಮಾಂಡ್ ಬಳಿ ಹೋಗಿ ಲಾಭಿ ಮಾಡುತ್ತಿದ್ದಾರೆ. ಇದರಿಂದ ಆಡಳಿತ ಸಂಪೂರ್ಣವಾಗಿ ಕುಸಿದು ಹೋಗಿದೆ ಎಂದರು.
ರಾಜ್ಯದಲ್ಲಿ ಬರಗಾಲ ಇರುವುದರಿಂದ ಸಕಾಲದಲ್ಲಿ ಮಳೆ ಆಗಿಲ್ಲ. ರಾಜ್ಯದ ಉದ್ದಗಲಕ್ಕೂ ಕುಡಿವ ನೀರಿನ ಸಮಸ್ಯೆಯಾಗಿದೆ. ವಿಧಾನಸೌಧದಲ್ಲಿ ಕೂತು ಆಡಳಿತ ಮಾಡಿ. ಯಾವ ಯಾವ ಜಿಲ್ಲೆಗಳಲ್ಲಿ ಕುಡಿವ ನೀರಿನ ಸಮಸ್ಯೆ ಇದೆ. ಆ ಜಿಲ್ಲೆಗಳಿಗೆ ಕೂಡಲೇ ಅನುದಾನ ಕೊಡಬೇಕು. ರಾಜ್ಯದ ಪ್ರತಿ ಜಿಲ್ಲೆಗೂ ತಲಾ ೫೦ ಕೋಟಿ ರೂ. ಕುಡಿವ ನೀರಿಗಾಗಿ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.