ಶ್ರೀ ರಾಮಲಿಂಗೇಶ್ವರ ಮಹಾರಾಜ್​ಕಿ ಜೈ

ಚಿಂಚೋಳಿ ಮತೇತ್ರದ ಕೋಡ್ಲಿಯಲ್ಲಿ ಅಸಂಖ್ಯಾತ ಭಕ್ತರ ಜೈೂಷದೊಂದಿಗೆ ಸಂಭ್ರಮದಿಂದ ಶ್ರೀ ರಾಮಲಿಂಗೇಶ್ವರರ ರಥೋತ್ಸವ ನಡೆಯಿತು
ಚಿಂಚೋಳಿ ಮತೇತ್ರದ ಕೋಡ್ಲಿಯಲ್ಲಿ ಅಸಂಖ್ಯಾತ ಭಕ್ತರ ಜೈೂಷದೊಂದಿಗೆ ಸಂಭ್ರಮದಿಂದ ಶ್ರೀ ರಾಮಲಿಂಗೇಶ್ವರರ ರಥೋತ್ಸವ ನಡೆಯಿತು
Published on

ಪ್ರಮುಖ ಮುಖ್ಯಾಂಶಗಳು

  • ಕೋಡ್ಲಿಯಲ್ಲಿ ಜಾತ್ರೋತ್ಸವ ಸಂಭ್ರಮ
  • ದೇವರಿಗೆ ವಿಶೇಷ ಪೂಜೆ, ಪಲ್ಲಕ್ಕಿ ಉತ್ಸವ
ಚಿಂಚೋಳಿ: ಕೋಡ್ಲಿ ಗ್ರಾಮದಲ್ಲಿ ಶ್ರೀ ರಾಮಲಿಂಗೇಶ್ವರರ ಜಾತ್ರೋತ್ಸವ ನಿಮಿತ್ತ ಗುರುವಾರ ಸಂಜೆ ಅಸಂಖ್ಯಾತ ಭಕ್ತರ ಜೈೂಷದೊಂದಿಗೆ ಅದ್ದೂರಿ ರಥೋತ್ಸವ ನಡೆಯಿತು.
ಬೆಳಗ್ಗೆ ಶ್ರೀ ರಾಮಲಿಂಗೇಶ್ವರ ದೇವರಿಗೆ ವಿಶೇಷ ಪೂಜೆ, ಅರ್ಚನೆ, ಪುಷ್ಪಾಲಂಕಾರ ಜರುಗಿತು. ಸಂಜೆ ದೇಶಮುಖರ ಮನೆಯಿಂದ ಪಲ್ಲಕ್ಕಿ, ಕುಂಭವನ್ನು ವಿವಿಧ ವಾದ್ಯಗಳೊಂದಿಗೆ ತೇರು ಮೈದಾನಕ್ಕೆ ತರಲಾಯಿತು. ಸಂಜೆ ಭರತನೂರಿನ ಶ್ರೀ ಚಿಕ್ಕಗುರುನಂಜೇಶ್ವರ ಸ್ವಾಮೀಜಿ, ಶ್ರೀ ಬಸವಲಿಂಗ ಶಿವಾಚಾರ್ಯರ ಸಮ್ಮುಖದಲ್ಲಿ ಸಂಜೆ ಮಹಾರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಅಪಾರ ಭಕ್ತರು ಶ್ರೀ ರಾಮಲಿಂಗೇಶ್ವರ ಮಹಾರಾಜ್​ಕಿ ಜೈ.. ಜೈ ಹನುಮಾನ್​.. ಸಿಯಾವರ್​ ರಾಮಚಂದ್ರಕಿ ಜೈ.. ಸೇರಿ ವಿವಿಧ ಜೈಜೋಷ ಮೊಳಗಿಸಿದರು. ಜನರು ಉತ್ತತ್ತಿ, ನಾರು, ಬಾಳೆಹಣ್ಣು, ನಾಣ್ಯ, ಹೂವು ಅರ್ಪಿಸಿ ಭಕ್ತಿ ಮೆರೆದರು.
ಪ್ರಮುಖರಾದ ರಾಮಲಿಂಗಾರೆಡ್ಡಿ ದೇಶಮುಖ, ಮಲ್ಲಿನಾಥ ಕೋಲಕುಂದಿ, ಗುರುಸಿದ್ದಯ್ಯ ಹುಳಗೇರಿ, ಮಲ್ಲಿಕಾರ್ಜುನ ಸಪ್ಪನಗೋಳ, ಅಣ್ಣಾರಾವ ಪೆದ್ದಿ, ಶ್ರೀಮಂತ ಬುಬಲಿ, ಅಣ್ಣಾರಾವ ಅರಳಿ, ಶಿವು ಸುಲೇಪೇಟ, ಚಂದಪ್ಪ ಮೋಘಾ, ಶಬ್ಬೀರ್​ಮಿಯ್ಯ ಸೌದಾಗರ, ಪ್ರವಿಣಕುಮಾರ ಪಾಟೀಲ್​, ಸಿದ್ದು ಪೆದ್ದಿ, ಸಂತೋಷ ಪಾಟೀಲ್​, ಶಶಿಕಾಂತ ಆಡಕಿ, ಶಿವಕುಮಾರ ಪೆದ್ದಿ, ಜಗನ್ನಾಥ ಮಗಿ, ಉಮೇಶ ವಂಜರಗಿ, ಮಲ್ಲಿಕಾರ್ಜುನ ವಂಜರಗಿ, ಸಿದ್ದು ಬುಬಲಿ, ವೀರಭದ್ರಪ್ಪ ಓತಿ, ಬಸವರಾಜ ಕರಕಮುಕಲಿ, ಸಿದ್ದು ನಿಣ್ಣಿ, ಹಣಮಂತ ಅರಳಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net