ಶ್ರೀ ಘನಲಿಂಗ ರುದ್ರಮುನಿ ಜಾತ್ರೆ ಇಂದು

,
,
Published on

ಬಸವಕಲ್ಯಾಣ: ನಗರದ ತ್ರಿಪುರಾಂತನ ಸಂಸ್ಥಾನ ಗವಿ ಮಠದಲ್ಲಿ ಮಂಗಳವಾರ ಬೆಳಗ್ಗೆ 11&30ಕ್ಕೆ ಶ್ರೀ ನಲಿಂಗ ರುದ್ರಮುನಿ ಜಾತ್ರೆ ಹಾಗೂ ಅಭಿನವ ನಲಿಂಗ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ. ಅಫಜಲಪುರ ಸಂಸ್ಥಾನ ಹಿರೇಮಠದ ಶ್ರೀ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯ, ಕಲಬುರಗಿಯ ಚೌದಾಪುರಿ ಮಠದ ಶ್ರೀ ರಾಜಶೇಖರ ಶಿವಾಚಾರ್ಯ ಸಾನ್ನಿಧ್ಯ, ಶ್ರೀ ಡಾ.ಅಭಿನವ ನಲಿಂಗ ರುದ್ರಮುನಿ ಶಿವಾಚಾರ್ಯ ನೇತೃತ್ವ ಹಾಗೂ ಮಹಾರಾಷ್ಟ್ರದ ಅಚಲೇರಿ ಹಿರೇಮಠದ ಶ್ರೀ ಸೂತ್ರೇಶ್ವರ ಶಿವಾಚಾರ್ಯ, ಓಂಕಾರ ಬೇನೂರ ಮಹಾಲಿಂಗೇಶ್ವರ ಮಠದ ಶ್ರೀ ಸಿದ್ಧರೇಣುಕ ಶಿವಾಚಾರ್ಯ ಸಮ್ಮುಖ ವಹಿಸುವರು. ಶಾಸಕ ಶರಣು ಸಲಗರ, ಎಂಎಲ್​ಸಿ ಎಂ.ಜಿ.ಮುಳೆ, ಮೀನುಗಾರಿಕೆ ಅಭಿವೃದ್ಧಿ ನಿಗಮ ಅಧ್ಯೆ ಮಾಲಾ ಬಿ .ನಾರಾಯಣರಾವ, ಕಾಡಾ ಅಧ್ಯಕ್ಷ ಬಾಬುಹೊನ್ನಾ ನಾಯಕ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಕಾರ್ಯಕ್ರಮ ಉದ್ಘಾಟಿಸಲಿದ್ದು, ಟ್ರಸ್ಟ್​ನ ಕಾರ್ಯಾಧ್ಯಕ್ಷ ಶರಣಪ್ಪ ಬಿರಾದಾರ ಅಧ್ಯಕ್ಷತೆ ವಹಿಸುವರು. ಗುರು ನಲಿಂಗ ಗುರುವಿನ ಲೀಲಾ ಧ್ವನಿ ಸುರಳಿಯನ್ನು ಮಾಜಿ ಎಂಎಲ್​ಸಿ ವಿಜಯಸಿಂಗ್​ ಬಿಡುಗಡೆ ಮಾಡುವರು. ಕೆಪಿಸಿಸಿ ಸಹಕಾರ ವಿಭಾಗದ ಧನರಾಜ ತಾಳಂಪಳ್ಳಿ, ಕರ್ನಾಟಕ ನೀರಾವರಿ ನಿಗಮದ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ, ಕನ್ನಡ ಮತ್ತು ಸಂಸತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಮುಖ್ಯ ಅತಿಥಿಗಳಾಗಿ, ಜಿಪಂ ಮಾಜಿ ಉಪಾಧ್ಯೆ ಲತಾ ಹಾರಕೂಡೆ, ಮುಖಂಡರಾದ ಬಸವರಾಜ ಸ್ವಾಮಿ, ಪ್ರದಿಪ ವಾತಡೆ, ಚನ್ನಬಸಪ್ಪ ಬಳತೆ, ಅನಿಲ ಭೂಸಾರೆ, ಅರ್ಜುನ ಕನಕ, ಬಸವರಾಜ ಮುರುಡೆ, ಅಮರ ಬಡದಾಳೆ, ವೀರಶೆಟ್ಟಿ ಮಲಶೆಟ್ಟಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿವಿದ ೇತ್ರಗಳಲ್ಲಿ ಸಾಧನೆ ಮಾಡಿರುವ ಎ.ಜಿ.ಪಾಟೀಲ್​, ಸರಸ್ವತಿ ಬೆಂಬಳಿ ವಿ.ಕೆ.ಸಲಗರ, ಜಯಪ್ರಕಾಶ ಸ್ವಾಮಿ ಉಮರ್ಗಾಕರ್​ ಹುಮನಾಬಾದ್​, ದಿಲೀಪಗೀರ ಗೋಸಾವಿ ಗೋಕುಳ, ರವಿ ನಾಗದ್ಗೇಕರ್​, ಶಿವಕುಮಾರ ಬಿರಾದಾರ, ಲೋಕೇಶ ಮೋಳಕೇರೆ ಪ್ರತಾಪುರ ಇವರಿಗೆ 2026ರ ಅಭಿನವ ನಲಿಂಗ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಶಿವರಾಜ ಪಾಟೀಲ್​, ನಾಗೇಂದ್ರ ಲಚ್ಚಪ್ಪನವರು, ಮಲ್ಲಪ್ಪ ಬಾಗೇವಾಡಿ, ಓಂಕಾರ ಬಿರಾದಾರ, ಸುಭಾಷ ರಗಟೆ ಅವರನ್ನು ವಿಶೇಷ ಸನ್ಮಾನಿಸಲಾಗುವುದು. ಗೋಕುಳ ಸರಸ್ವತಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಮಕ್ಕಳಿಂದ ಸಾಂಸತಿಕ ಕಾರ್ಯಕ್ರಮ ಜರುಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net