ಭೀಮಾತೀರದಲ್ಲಿ 6 ಮಂದಿ ಭೀಕರ ಹತ್ಯೆ ಪ್ರಕರಣ: 12 ಆರೋಪಿಗಳನ್ನು ಬಂಧಿಸಿದ ಪೊಲೀಸರು! Bheema Theera

ಭೀಮಾತೀರದಲ್ಲಿ 6 ಮಂದಿ ಭೀಕರ ಹತ್ಯೆ ಪ್ರಕರಣ: 12 ಆರೋಪಿಗಳನ್ನು ಬಂಧಿಸಿದ ಪೊಲೀಸರು! Bheema Theera
ಭೀಮಾತೀರದಲ್ಲಿ 6 ಮಂದಿ ಭೀಕರ ಹತ್ಯೆ ಪ್ರಕರಣ: 12 ಆರೋಪಿಗಳನ್ನು ಬಂಧಿಸಿದ ಪೊಲೀಸರು! Bheema Theera
Published on

ಪ್ರಮುಖ ಮುಖ್ಯಾಂಶಗಳು

  • ವಿಜಯಪುರದ ಚಡಚಣ ತಾಲೂಕಿನ ಗೋವಿಂದಾಪುರ ಗ್ರಾಮದಲ್ಲಿ ಕಳೆದ ವಾರ ನಡೆದ ಭೀಕರ ಹತ್ಯಾಕಾಂಡ
  • ಒಂದೇ ಕುಟುಂಬದ ಆರು ಜನರನ್ನು ಮಾರಾಕಾಸ್ತ್ರದಿಂದ ಭೀಕರವಾಗಿ ಕೊಚ್ಚಿ ಕೊಲೆ
  • ಪ್ರಕರಣಕ್ಕೆ ಸಂಬಂಧಿಸಿದಂತೆ 12 ಮಂದಿ ಆರೋಪಿಗಳನ್ನು ಬಂಧಿಸಿದ ವಿಜಯಪುರ ಪೊಲೀಸರು
ವಿಜಯಪುರ: ಚಡಚಣ ತಾಲೂಕಿನ ಗೋವಿಂದಾಪುರ ಗ್ರಾಮದಲ್ಲಿ ಕಳೆದ ವಾರ ನಡೆದ ಭೀಕರ ಹತ್ಯಾಕಾಂಡ ( Bheema Theera ) ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 12 ಮಂದಿ ಆರೋಪಿಗಳನ್ನು ಬಂಧಿಸಿ ಸೋಮವಾರ ಇಂಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಗೋವಿಂದಾಪುರದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಪೊಲೀಸರು ನಡೆಸಿದ ತನಿಖೆ ವೇಳೆ ಪ್ರಮುಖ ಆರೋಪಿಗಳ ಪತ್ತೆಯಾಗಿದ್ದು, ಮಹಾಸಿದ್ದ ಶ್ರೀಮಂತ ಬಿರಾದಾರ, ಲಯಪ್ಪ ನೆನಪ್ಪ ಬಿರಾದಾರ, ಕಲ್ಲಾಣಗೌಡ ಈಶ್ವರಗೌಡ ಪಾಟೀಲ್ ಸೇರಿದಂತೆ ಒಟ್ಟು 12 ಮಂದಿಯನ್ನು ಬಂಧಿಸಲಾಗಿದೆ. 

ಬಂಧಿತ ಆರೋಪಿಗಳ ವಿವರ

ಮಹಾಸಿದ್ದ ಶ್ರೀಮಂತ ಬಿರಾದಾರ (44), ಮಹೇಶ್ ಲಕ್ಷ್ಮಣ್ ಬಿರಾದಾರ (22), ರಾಜಕುಮಾರ್ ಸಿದ್ದರಾಮ ಕೊಲಿ (28), ರಾಜು ಚಂದ್ರಕಾಂತ್ ಉಗಾರ್ (20), ಯಲ್ಲಪ್ಪ ಮಹದೇವ್ ಅರಕೆರಿ (25), ಕಲ್ಲಾಣಗೌಡ ಈಶ್ವರಗೌಡ ಪಾಟೀಲ್ (65), ಲಯಪ್ಪ ನೆನಪ್ಪ ಬಿರಾದಾರ (65), ಸುಭಾಸ್ ಮಹಾಸಿದ್ದ ಬಿರಾದಾರ (21), ರವಾಸಾಬ್ ಅವದುತ್ ಬಿರಾದಾರ (20), ಗಜಾನಂದ ಭುತಾಲೆ ಬಿರಾದಾರ (20), ಮಲಕರಿ ಹನಮಂತ್ ಕೊಲಿ (18) ಮತ್ತು ಸಂಜು ಮಹದೇವ್ ಅರಕೆರಿ (31). 
ಪೊಲೀಸರು ಆರೋಪಿಗಳನ್ನು ಸೋಮವಾರ ಇಂಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಹೆಚ್ಚಿನ ತನಿಖೆಗಾಗಿ ನ್ಯಾಯಾಲಯವು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರೆದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net