ರಂಗಕರ್ಮಿ ಶಿವಯ್ಯಸ್ವಾಮಿ ಬಿಬ್ಬಳ್ಳಿ ನಿರ್ದೇಶಿಸಿದ್ದಾರೆ. ಶ್ರೀ ಗುರು ಮಡಿವಾಳೇಶ್ವರ ನವ ತರುಣ ನಾಟ್ಯ ಸಂದಿಂದ ಪ್ರಥಮ ಬಾರಿಗೆ ಪ್ರದರ್ಶನ ನಡೆಯಲಿದೆ. ಹಾಲಪ್ಪಯ್ಯ ವಿರಕ್ತ ಮಠದ ಆಧ್ಯಾತ್ಮಿಕ ಪುರುಷ, ಪವಾಡವನ್ನೇ ಮಾಡುವ ಮೂಲಕ ಸಮಾಜದಲ್ಲಿ ಭಕ್ತಿಯ ಬೀಜ ಬಿತ್ತಿದ ತಪ್ಪಸ್ವಿ ಹಾಲಪ್ಪಯ್ಯ ಶಿವಯೋಗಿಗಳ ಜೀವನ ಚರಿತ್ರೆ ಆಧ್ಯಾತ್ಮಿಕತೆಯಿಂದ ಕೂಡಿದೆ. ಮಂಗಳವಾರ ರಾತ್ರಿ 10ಕ್ಕೆ ಸಚಿವ ಡಾ.ಶರಣಪ್ರಕಾಶ ಪಾಟೀಲ್ ನಾಟಕ ಉದ್ಘಾಟಿಸಲಿದ್ದಾರೆ. ಶ್ರೀ ಶಿವಶಂಕರ ಶಿವಾಚಾರ್ಯ, ಶ್ರೀ ಸದಾಶಿವ ಸ್ವಾಮೀಜಿ, ಶ್ರೀ ಡಾ.ತ್ರಿಮೂರ್ತಿ ಶಿವಾಚಾರ್ಯ, ಶ್ರೀ ಕೊಟ್ಟೂರೇಶ್ವರ ಸ್ವಾಮೀಜಿ, ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರು ಸಾನ್ನಿಧ್ಯವಹಿಸಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.