ಶಿವನಾಮ ಸ್ಮರಣೆಯಿಂದ ಸಂಕಷ್ಟ ದೂರ

ಚನ್ನಮ್ಮನ ಕಿತ್ತೂರು ಪಟ್ಟಣದಲ್ಲಿ ಮಹಾಶಿವರಾತ್ರಿ ಅಂಗವಾಗಿ ಹಮ್ಮಿಕೊಂಡಿದ್ದ ಮಹಾಶಿವರಾತ್ರಿಯ ಮಹಿಮೆ ಶಿವ ಕೀರ್ತನೆ ಕಾರ್ಯಕ್ರಮದಲ್ಲಿ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಪಂಚಾರಿ ಸ್ವಾಮೀಜಿ ಇತರರಿದ್ದರು.
ಚನ್ನಮ್ಮನ ಕಿತ್ತೂರು ಪಟ್ಟಣದಲ್ಲಿ ಮಹಾಶಿವರಾತ್ರಿ ಅಂಗವಾಗಿ ಹಮ್ಮಿಕೊಂಡಿದ್ದ ಮಹಾಶಿವರಾತ್ರಿಯ ಮಹಿಮೆ ಶಿವ ಕೀರ್ತನೆ ಕಾರ್ಯಕ್ರಮದಲ್ಲಿ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಪಂಚಾರಿ ಸ್ವಾಮೀಜಿ ಇತರರಿದ್ದರು.
Published on
ಚನ್ನಮ್ಮನ ಕಿತ್ತೂರು: ಶ್ರದ್ಧಾ, ಭಕ್ತಿಯಿಂದ ನಿತ್ಯ ಶಿವನಾಮ ಸ್ಮರಣೆ ಮಾಡಿದರೆ ಬದುಕಿನಲ್ಲಿ ಕಷ್ಟ&ಕಾರ್ಪಣ್ಯ ಕಳೆದು ಸುಖ, ಶಾಂತಿ ಹಾಗೂ ನೆಮ್ಮದಿ ಪ್ರಾಪ್ತವಾಗುತ್ತದೆ ಎಂದು ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು. ಇಲ್ಲಿನ ಕಲ್ಮಠದ ಶಂಕರ ಚಂದರಗಿ ಸಭಾ ಭವನದಲ್ಲಿ ರಾಜಗುರು ಸಂಸ್ಥಾನ ಕಲ್ಮಠ ಹಾಗೂ ತಾಲೂಕು ಕನ್ನಡ ಸಾಹಿತ್ಯಪರಿಷತ್​ ಸಂಯುಕ್ತಾಶ್ರಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ಮಹಾಶಿವರಾತ್ರಿಯ ಮಹಿಮೆ ಶಿವ ಕೀರ್ತನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಿದ್ಧರಾಮಶಾಸ್ತ್ರಿ ಹಿರೇಮಠ ಮಾತನಾಡಿ, ಭಕ್ತಿ, ಜಾಗರಣೆ ಮತ್ತು ಆತ್ಮ ಚಿಂತನೆಗಳ ಮಹೋತ್ಸವವೇ ಮಹಾಶಿವರಾತ್ರಿಯಾಗಿದೆ. ಪ್ರತಿಯೊಬ್ಬರು ಈ ಪವಿತ್ರ ದಿನದಂದು ಉಪವಾಸ ಮಾಡಿ ಭಜನೆ, ಶಿವ ಪೂಜೆ ಮೂಲಕ ಶಿವನ ಧ್ಯಾನ ಮಾಡಬೇಕು ಎಂದರು. ತಾಲೂಕು ಕಸಾಪ ಅಧ್ಯಕ್ಷ ಡಾ.ಎಸ್​.ಬಿ.ದಳವಾಯಿ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿಯೊಬ್ಬರು "ಓಂ ನಮ@ ಶಿವಾಯ' ಮಂತ್ರ ಜಪಿಸುವ ಮೂಲಕ ಭಗವಂತನ ಕೃಪೆಗೆ ಪಾತ್ರರಾಗಬೇಕು ಎಂದು ತಿಳಿಸಿದರು. ನಿಚ್ಚಣಕಿಯ ಪಂಚಾರಿ ಸ್ವಾಮೀಜಿ ಆಶೀರ್ವಚನ ನೀಡಿದರು. ಡಾ.ಜಗದೀಶ ಹಾರೂಗೋಪ್ಪ, ಸಿಪಿಐ ಶಿವಾನಂದ ಗುಡುಗನಟ್ಟಿ, ಈಶ್ವರ ಗಡಿಬಿಡಿ, ಪ್ರಲ್ಹಾದ ಶಿಗ್ಗಾಂವಿ, ಮಹೇಶ್ವರ ಹೊಂಗಲ, ಉಮಾದೇವಿ ಬಿಕ್ಕಣ್ಣವರ, ಬಸವಪ್ರಭು ಪಾಟೀಲ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net