ಶಿರಪುರ ಮಾದರಿ ಕಾಮಗಾರಿ ಅವೈಜ್ಞಾನಿಕ

ಮಾದಹಿಪ್ಪರಗಿ ವಲಯದಲ್ಲಿ ನಡೆದಿರುವ ಶಿರಪುರ ಮಾದರಿ ಕಾಮಗಾರಿ ಸ್ಥಳಕ್ಕೆ ಬಿಜೆಪಿ ಮುಖಂಡರು ಭೇಟಿ ನೀಡಿ ಪರಿಶೀಲಿಸಿದರು. ಸಾತಪ್ಪ ಕೋಳಶೆಟ್ಟಿ, ರಾಜಕುಮಾರ ಕುಂಬಾರ, ಸಿದ್ದರಾಮ ತೋಳನೂರ, ಬಸವರಾಜ ಶಾಸಿ, ಧರೆಪ್ಪ ಗುಳಗಿ ಇತರರಿದ್ದರು.
ಮಾದಹಿಪ್ಪರಗಿ ವಲಯದಲ್ಲಿ ನಡೆದಿರುವ ಶಿರಪುರ ಮಾದರಿ ಕಾಮಗಾರಿ ಸ್ಥಳಕ್ಕೆ ಬಿಜೆಪಿ ಮುಖಂಡರು ಭೇಟಿ ನೀಡಿ ಪರಿಶೀಲಿಸಿದರು. ಸಾತಪ್ಪ ಕೋಳಶೆಟ್ಟಿ, ರಾಜಕುಮಾರ ಕುಂಬಾರ, ಸಿದ್ದರಾಮ ತೋಳನೂರ, ಬಸವರಾಜ ಶಾಸಿ, ಧರೆಪ್ಪ ಗುಳಗಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಾಪಂ ಮಾಜಿ ಸದಸ್ಯ ಸಾತಪ್ಪ ಕೋಳಶೆಟ್ಟಿ ಆರೋಪ
  • ಶಿರಪುರ ಮಾದರಿ ಕಾಮಗಾರಿ ಸ್ಥಳಕ್ಕೆ ಬಿಜೆಪಿ ಮುಖಂಡರು ಭೇಟಿ
ಮಾದನಹಿಪ್ಪರಗಿ: ಶಾಸಕ ಬಿ.ಆರ್​.ಪಾಟೀಲ್​ ಅವರ ಕೈಗೊಂಡಿರುವ ಹಳ್ಳಗಳಲ್ಲಿ ನೀರು ನಿಲ್ಲಿಸುವ ಶಿರಪುರ ಮಾದರಿ ಕಾಮಗಾರಿ ಅವೈಜ್ಞಾನಿಕವಾಗಿದ್ದು, ಕೋಟ್ಯಂತರ ರೂ. ಹಣ ಪೋಲಾಗಿದೆ ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸಾತಪ್ಪ ಕೋಳಶೆಟ್ಟಿ, ಮುಖಂಡರಾದ ರಾಜಕುಮಾರ ಕುಂಬಾರ, ಸಿದ್ದರಾಮ ತೋಳನೂರ ದೂರಿದರು.
ಶನಿವಾರ ವಲಯದಲ್ಲಿ ಶಿರಪುರ ಮಾದರಿಯಡಿ ಕಾಮಗಾರಿ ಕೈಗೊಂಡ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು, ಶಿರಪುರ ಮಾದರಿ ಕಾಮಗಾರಿ ಬರುವುದಕ್ಕಿಂತ ಮುಂಚೆ ಕೇರೂರ, ದರ್ಗಾಶಿರೂರ, ಮಾದನಹಿಪ್ಪರಗಿ ಹಳ್ಳಗಳಿಗೆ ಮಾಜಿ ಶಾಸಕ ಸುಭಾಷ ಆರ್​.ಗುತ್ತೇದಾರ್​ ಅವರು ತಮ್ಮ ಅಧಿಕಾರದವಧಿಯಲ್ಲಿ ಹಲವಾರು ಚೆಕ್​ ಡ್ಯಾಮ್​ಗಳು ಕಟ್ಟಿಸಿದ್ದರು. ಅವುಗಳಿಗೆ ಗೇಟ್​ಗಳನ್ನು ಅಳವಡಿಸಲಾಗಿತ್ತು. ಮಳೆಗಾಲ ಮುಗಿದ ನಂತರ ಗೇಟ್​ ಬಂದ ಮಾಡಲಾಗುತ್ತಿತ್ತು. ಆಗ ನೀರು ಚೆಕ್​ ಡ್ಯಾಮ್​ಗಳಲ್ಲಿ ಸಂಗ್ರಹವಾಗಿ ಜನರು, ರೈತರಿಗೆ ಅನುಕೂಲವಾಗುತ್ತಿತ್ತು ಎಂದರು.
ಶಿರಪುರ ಮಾದರಿ ಕಾಮಗಾರಿ ಆರಂಭಗೊಂಡ ನಂತರ ಹಳ್ಳಗಳನ್ನು ಸಮತಟ್ಟಾಗಿ ಹೂಳೆತ್ತಿ ನೀರು ಸರಾಗವಾಗಿ ಹರಿಯಲು ಅನುವು ಮಾಡಿಕೊಟ್ಟರು. ಎಲ್ಲಿಯೂ ನೀರು ನಿಲ್ಲಲು ಸಾಧ್ಯವೇ ಇಲ್ಲ. ಗ್ರಾಮದ ಹತ್ತಿರ ಹಳ್ಳಕ್ಕೆ ಶಿರಪುರ ಮಾದರಿ (ಅಡ್ಡ ಗೋಡೆ ) ಕಾಮಗಾರಿ ನಿರ್ಮಿಸಿರುವುದರಿಂದ ಸಂಪೂರ್ಣ ಹೂಳು ತುಂಬಿ ಗೋಡೆ ಮೇಲಿಂದ ನೀರು ಹರಿದು ಹೋಗುತ್ತಿದೆ. ಇದ್ಯಾವುದನ್ನೂ ನೋಡದೆ ಕಾಂಗ್ರೆಸ್​ ಕಾರ್ಯಕರ್ತರು ಯೋಜನೆ ಸಫಲವಾಗಿದೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದು ದೂರಿದರು.
ಬಸವರಾಜ ಶಾಸಿ, ಧರೆಪ್ಪ ಗುಳಗಿ, ಧರ್ಮಣ್ಣ ಕೌಲಗಿ, ಮಲ್ಲಿನಾಥ ಮಾಸನಳ್ಳಿ, ನಾಗಪ್ಪ ಹಲಗೆ, ಮಲ್ಲಿನಾಥ ಬಂಬಾಸೆ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net