ಶಿರಸಂಗಿ ಲಿಂಗರಾಜರ ಕಾರ್ಯಮಾದರಿ

ಖಾನಾಪುರ ಪಟ್ಟಣದ ಕೆಎಲ್​ಇ ಸಂಸ್ಥೆಯ ಎಂ.ಎಸ್​.ಹೊಸಮನಿ ಪಿಯು ಕಾಲೇಜಿನಲ್ಲಿ 165ನೇ ಲಿಂಗರಾಜ ಜಯಂತಿ ಆಚರಿಸಲಾಯಿತು. ವಿಜಯ ಕಲ್ಮಠ, ಆನಂದ ತಾವಂಶಿ, ಅಶ್ವಿನಿ ಪಾಲೇಕರ, ಗುರುದೇವಿ ಹಿರೇಮಠ, ವಿ.ಕೆ.ಪೂಜಾರ ಇತರರಿದ್ದರು.
ಖಾನಾಪುರ ಪಟ್ಟಣದ ಕೆಎಲ್​ಇ ಸಂಸ್ಥೆಯ ಎಂ.ಎಸ್​.ಹೊಸಮನಿ ಪಿಯು ಕಾಲೇಜಿನಲ್ಲಿ 165ನೇ ಲಿಂಗರಾಜ ಜಯಂತಿ ಆಚರಿಸಲಾಯಿತು. ವಿಜಯ ಕಲ್ಮಠ, ಆನಂದ ತಾವಂಶಿ, ಅಶ್ವಿನಿ ಪಾಲೇಕರ, ಗುರುದೇವಿ ಹಿರೇಮಠ, ವಿ.ಕೆ.ಪೂಜಾರ ಇತರರಿದ್ದರು.
Published on
ಖಾನಾಪುರ: ತ್ಯಾಗವೀರ, ಜ್ಞಾನ ದಾಸೋಹಿ ಶಿರಸಂಗಿ ಲಿಂಗರಾಜ ದೇಸಾಯಿ ಅವರು ಸಮಾಜಮುಖಿ ಕಾರ್ಯಕ್ಕೆ ಸರ್ವಸ್ವ ತ್ಯಾಗ ಮಾಡಿದ್ದಾರೆ ಎಂದು ಪ್ರಾಚಾರ್ಯ ವಿಜಯ ಕಲ್ಮಠ ಹೇಳಿದರು.
ಪಟ್ಟಣದ ಕೆಎಲ್​ಇ ಸಂಸ್ಥೆಯ ಎಂ.ಎಸ್​.ಹೊಸಮನಿ ಪಿಯು ಕಾಲೇಜಿನಲ್ಲಿ ಈಚೆಗೆ ಹಮ್ಮಿಕೊಂಡಿದ್ದ 165ನೇ ಶಿರಸಂಗಿ ಲಿಂಗರಾಜ ಜಯಂತಿ ಆಚರಿಸಿ ಮಾತನಾಡಿ, ತ್ಯಾಗ ಭಾವವಿರುವವರು ಮಾತ್ರ ಅಮರರಾಗಲು ಸಾಧ್ಯ. ಈ ಸಾಲಿನಲ್ಲಿ ಶಿರಸಂಗಿ ಲಿಂಗರಾಜ ದೇಸಾಯಿ ಅವರು ಒಬ್ಬರು. ಜನಸೇವೆಗೆ ಹೆಸರಾದ ಇವರು ತನು, ಮನ, ಧನದಿಂದ ಸಮಾಜ ಸೇವೆ ಮಾಡಿ ಇತರರಿಗೆ ಮಾದರಿಯಾಗಿದ್ದಾರೆ ಎಂದರು.
ಬಿಸಿಎ ಪ್ರಾಂಶುಪಾಲ ಆನಂದ ತಾವಂಶಿ, ಸಿಬ್ಬಂದಿ ವಿ.ಕೆ.ಪೂಜಾರ, ಮಹೇಶ ಕಲ್ಯಾಣಿ, ಪಾಂಡುರಂಗ ಭಾತಕಾಂಡೆ, ಅಶ್ವಿನಿ ಪಾಲೇಕರ, ಗುರುದೇವಿ ಹಿರೇಮಠ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net