ಶಿಲ್ಪಕಲಾ ಅಕಾಡೆಮಿಯ ಗೌರವ ಪ್ರಶಸ್ತಿ ಪ್ರಕಟ

ಕರ್ನಾಟಕ ಶಿಲ್ಪಕಲಾ ಅಕಾಡೆಮಿ
ಕರ್ನಾಟಕ ಶಿಲ್ಪಕಲಾ ಅಕಾಡೆಮಿ
Published on

ಪ್ರಮುಖ ಮುಖ್ಯಾಂಶಗಳು

  • * ಶಿಲ್ಪಶ್ರೀ ಪ್ರಶಸ್ತಿಗೆ ಹತ್ತು ಕಲಾವಿದರು ಆಯ್ಕೆ
  • * ಮಾರ್ಚ್‌ನಲ್ಲಿ ನಡೆಯುವ ಶಿಲ್ಪಕಲಾ ಪ್ರದರ್ಶನದಲ್ಲಿ ಪ್ರಶಸ್ತಿ ಪ್ರದಾನ
ಬೆಂಗಳೂರು: ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು 2024 ಹಾಗೂ 2025ನೇ ಸಾಲಿನ ಗೌರವ ಪ್ರಶಸ್ತಿ ಮತ್ತು 2024ನೇ ಸಾಲಿನ ಶಿಲ್ಪಶ್ರೀ ಪ್ರಶಸ್ತಿ ಹಾಗೂ 19ನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನದ ಶಿಲ್ಪಕಲಾ ಕೃತಿಗಳ ಬಹುಮಾನ ಪ್ರಕಟಿಸಿದೆ.
ಗೌರವ ಪ್ರಶಸ್ತಿಯು ತಲಾ 50 ಸಾವಿರ ನಗದು, ನೆನಪಿನ ಕಾಣಿಗೆ ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ. ಶಿಲ್ಪಶ್ರೀ ಪ್ರಶಸ್ತಿಯು ತಲಾ 25 ಸಾವಿರ ನಗದು, ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ. ಮಾರ್ಚ್‌ನಲ್ಲಿ ನಡೆಯಲಿರುವ ಶಿಲ್ಪಕಲಾ ಪ್ರದರ್ಶನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಕಾಡೆಮಿ ಅಧ್ಯಕ್ಷ ಎಂ.ಸಿ.ರಮೇಶ್ ತಿಳಿಸಿದ್ದಾರೆ.
2024ನೇ ಸಾಲಿನ ಗೌರವ ಪ್ರಶಸ್ತಿಗೆ ದಾವಣಗೆರೆಯ ಎ.ಪಿ.ಶ್ರೀಕಂಠಾಚಾರ್ಯ (ಸಂಪ್ರದಾಯ ಶಿಲ್ಪ), ಧಾರವಾಡದ ಸಾಯಿನಾಥ ಭೀಮರಾಯಪ್ಪ (ಸಂಪ್ರದಾಯ ಶಿಲ್ಪ), ಹಾವೇರಿಯ ಸೋಮಚಾರಿ (ಸಂಪ್ರದಾಯ ಶಿಲ್ಪ), ಮೈಸೂರಿನ ರಾಜುಬಾಬು (ಸಿಮೆಂಟ್ ಶಿಲ್ಪ), ವಿಜಯನಗರದ ಎಂ.ಕೆ. ಗಿರೀಶ್‌ಕುಮಾರ್ (ಸಮಕಾಲೀನ ಶಿಲ್ಪ) ಆಯ್ಕೆಯಾಗಿದ್ದಾರೆ.
2025ನೇ ಸಾಲಿಗೆ ಕಲಬುರಗಿಯ ಕಲ್ಲಣ್ಣ ಸಾಯಬಣ್ಣ ಕಂಬಾರ (ಸಂಪ್ರದಾಯ ಶಿಲ್ಪ), ರಾಯಚೂರಿನ ಅರವಿಂದ ವಿ. ಬಡಿಗೇರ (ರಥ ಶಿಲ್ಪ), ಗದಗದ ಯಚ್ಚರಪ್ಪ ನಾಗಲಿಂಗಪ್ಪ ಪತ್ತಾರ (ಸಂಪ್ರದಾಯ ಶಿಲ್ಪ), ಉತ್ತರ ಕನ್ನಡದ ಅರುಣ ಬುಕ್ಕಾ ಗುಡಿಗಾರ (ಸಂಪ್ರದಾಯ ಶಿಲ್ಪ), ಮೈಸೂರಿನ ಕೆ.ರಾಘವೇಂದ್ರ (ಸಮಕಾಲೀನ ಶಿಲ್ಪ) ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

2024ನೇ ಸಾಲಿನ ಶಿಲ್ಪಶ್ರೀ ಪ್ರಶಸ್ತಿ:

ಬಸ್ತಿ ಸದಾಶಿವ ಶೆಣೈ (ದಕ್ಷಿಣ ಕನ್ನಡ), ದೇವಿಪ್ರಸಾದ್ ಎಂ.ಮಾಯಾಚಾರ್ಯ (ಬಾಗಲಕೋಟೆ), ಮಂಜುನಾಥ ಡಿ.ಬಾರ್ಕಿ (ಹಾವೇರಿ), ರಾಜೇಶ್ ಎಂ. ಪತ್ತಾರ (ಗದಗ), ಆನಂದ ಹಾವನೂರು (ಬೆಳಗಾವಿ), ನವೀನ್ ಕಡ್ಲಾಸ್ಕರ್ (ಧಾರವಾಡ), ಕೆ.ಎನ್. ಕೃಷ್ಣಮೂರ್ತಿಚಾರ್ (ಚಿತ್ರದುರ್ಗ), ವಿಪಿನ್ ಬದೌರಿಯಾ (ಬೆಂಗಳೂರು), ಸಿ.ಪಿ. ವಿಶ್ವನಾಥ್ (ತುಮಕೂರು), ಎಂ. ಶರಣ್ (ಬೆಂಗಳೂರು ದಕ್ಷಿಣ) ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
19ನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನದ ಬಹುಮಾನ ವಿಜೇತರು
ವಿಜಯನಗರದ ಬಿ.ಬ್ರಹ್ಮಚಾರಿ ಅವರ ‘ಕಾಲಭೈರವ’ (ಕಲ್ಲು ಶಿಲ್ಪ), ಶಿವಮೊಗ್ಗದ ಎಲ್. ಪುರುಷೋತ್ತಮರ ‘ದೇವಿ’ (ಮರ ಶಿಲ್ಪ), ಶಿವಮೊಗ್ಗದ ಎಸ್. ರಾಘವೇಂದ್ರರ ‘ಬುದ್ಧ’ (ಮರ ಶಿಲ್ಪ), ದಾವಣಗೆರೆಯ ಡಿ.ಎಂ. ಪ್ರದೀಪ್ ಕುಮಾರ್ ‘ಧ್ಯಾನ ಸಂಗಮ’ (ಮಿಶ್ರ ಮಾಧ್ಯಮ), ಉಡುಪಿಯ ವಿಶ್ವೇಶ್ವರ ಪರ್ಕಳ ‘ಶೀರ್ಷಿಕೆ ರಹಿತ’ (ಮಿಶ್ರಮಾಧ್ಯಮ), ಮಂಡ್ಯದ ಕೆ.ಎಸ್.ಸ್ವಾತೀಶ್ ‘ಭದ್ರತೆ’ (ಮಿಶ್ರಮಾಧ್ಯಮ) ಶಿಲ್ಪಗಳು ಆಯ್ಕೆಯಾಗಿವೆ.

ಅಕಾಡೆಮಿಯ ಬಹುಮಾನ:

ಮೈಸೂರಿನ ರಾಮ್ಸನ್ಸ್ ಕಲಾ ಪ್ರತಿಷ್ಠಾನ ನೀಡುವ ಬಹುಮಾನಕ್ಕೆ ರಾಯಚೂರಿನ ಈರಣ್ಣ ಅವರ ‘ಸಗರನಾಡಿನ ಜಾನಪದ ಗ್ರಾಮದೇವತೆ’ (ಮರ ಶಿಲ್ಪ), ಮನೋಹರ ಕಾಳಪ್ಪ ಪತ್ತಾರ ವಿಜಯಪುರ ನೀಡುವ ಬಹುಮಾನಕ್ಕೆ ಕಲಬುರಗಿಯ ವಾದಿರಾಜ ಎಂ.ಬಡಿಗೇರ ‘ವೃಷಭವಾಹನ ಶಿವ’ (ಮರದ ಕಲಾಕೃತಿ), ತಲ್ಲೂರು ಫ್ಯಾಮಿಲಿ ಟ್ರಸ್ಟ್ ಉಡುಪಿ ನೀಡುವ ಬಹುಮಾನಕ್ಕೆ ಬೆಂಗಳೂರಿನ ರೂಪ ಖಂಗೋವಿ ‘ಅಜ್ಜನ ಸನ್‌ಡಕ್ ಕಾಯುತ್ತಿರುವ ಮಿಯ್ಯವ್’ (ಮಿಶ್ರಮಾಧ್ಯಮದ ಕಲಾಕೃತಿ) ಮತ್ತು ಬೆಂಗಳೂರಿನ ಪಿ.ಎಸ್. ಕೃಷ್ಣಮೂರ್ತಿ ‘ಸೆನ್ಟ ಆಫ್ ಥ್ರೆಡ್ಸ್’ (ರೇಷ್ಮಕಲಾಕೃತಿ) ಹಾಗೂ ಅರೇನಾ ಅನಿಮೇಷನ್ ಮಲ್ಲೇಶ್ವರ ನೀಡುವ ಬಹುಮಾನಕ್ಕೆ ಬಾಗಲಕೋಟೆಯ ಆನಂದ ಬಿಳಗಿ ಅವರ ‘ಅಭಿನವ ಶ್ರೀ’ (3ಡಿ ಪ್ರಿಂಟ್ ಪ್ಲಾಸ್ಟಿಕ್ ಫಿಲಮೆಂಟ್ ಕಲಾಕೃತಿ) ಆಯ್ಕೆಯಾಗಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net