ಶಹಾಪುರ ರಾಜ್ಯದಲ್ಲಿಯೇ ಮಾದರಿ ಮಾಡುವೆ

ಶಹಾಪುರ ಮತಕ್ಷೇತ್ರದ ಬಾಣತಿಹಾಳದಲ್ಲಿ ಬುಧವಾರ ಸಚಿವ ಶರಣಬಸಪ್ಪ ದರ್ಶನಾಪುರ 95 ಲಕ್ಷ ರೂ.ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಶಹಾಪುರ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಶಿವಮಹಾಂತಪ್ಪ ಸಾಹು, ತಿರುಪತಿ ಪಾಟೀಲ್​, ಧರ್ಮರಾಜ ದೊರೆ, ಭೀಮಾಶಂಕರ ಮರಿಗೌಡ ಹುಲಕಲ್​, ಸಿದ್ದಣ್ಣ ಕಿಲಾರಿ, ಮಾರುತಿ, ಶಿವಣ್ಣ ದೊರೆ, ಜಹಾಗಿರದಾರ ಗಂಗನಾಳ್​ ಇತರರಿದ್ದರು.
ಶಹಾಪುರ ಮತಕ್ಷೇತ್ರದ ಬಾಣತಿಹಾಳದಲ್ಲಿ ಬುಧವಾರ ಸಚಿವ ಶರಣಬಸಪ್ಪ ದರ್ಶನಾಪುರ 95 ಲಕ್ಷ ರೂ.ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ಶಹಾಪುರ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಶಿವಮಹಾಂತಪ್ಪ ಸಾಹು, ತಿರುಪತಿ ಪಾಟೀಲ್​, ಧರ್ಮರಾಜ ದೊರೆ, ಭೀಮಾಶಂಕರ ಮರಿಗೌಡ ಹುಲಕಲ್​, ಸಿದ್ದಣ್ಣ ಕಿಲಾರಿ, ಮಾರುತಿ, ಶಿವಣ್ಣ ದೊರೆ, ಜಹಾಗಿರದಾರ ಗಂಗನಾಳ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ದರ್ಶನಾಪುರ ಸಂಕಲ್ಪ
  • ಬಾಣತಿಹಾಳ-ಕಿಲಾರಿದೊಡ್ಡಿಯಲ್ಲಿ ರಸ್ತೆ ಕಾಮಗಾರಿಗೆ ಚಾಲನೆ
ಶಹಾಪುರ: ಅಭಿವೃದ್ಧಿಯಲ್ಲಿ ಶಹಾಪುರ ವಿಧಾನಸಭೆ ಮತಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿಯನ್ನಾಗಿ ಮಾಡುವ ಸಂಕಲ್ಪ ಹೊಂದಿದ್ದಾಗಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.
ಮತಕ್ಷೇತ್ರದ ಬಾಣತಿಹಾಳದಲ್ಲಿ ಕೆಕೆಆರ್​ಡಿಬಿ ಅನುದಾನದ 95 ಲಕ್ಷ ರೂ.ವೆಚ್ಚದ ಸಿಸಿ ರಸ್ತೆ ಮತ್ತು ಕಿಲಾರಿದೊಡ್ಡಿಯಲ್ಲಿ 30 ಲಕ್ಷ ರೂ.ಅನುದಾನದ ಸಿಸಿ ರಸ್ತೆ ಕಾಮಗಾರಿಗೆ ಬುಧವಾರ ಶಂಕುಸ್ಥಾಪನೆ ನೆರವೇರಿಸಿ ಹಾಗೂ ಗಂಗನಾಳದಲ್ಲಿ ಒಂದು ಕೋಟಿ ವೆಚ್ಚದಲ್ಲಿ ನಿರ್ಮಾಣದ ಹಂತದಲ್ಲಿ ರಸ್ತೆ ಕೆಲಸ ಪರಿಶೀಲಿಸಿ ಅವರು ಮಾತನಾಡಿದರು.
ಈಗಾಗಲೇ ಕ್ಷೇತ್ರದ ಪ್ರತಿ ಹಳ್ಳಿಗಳಲ್ಲೂ ಮೂಲಭೂತ ಸೌಕರ್ಯ ಒದಗಿಸುವತ್ತ ದಾಪುಗಾಲು ಇರಿಸಿದ್ದು, ಎಲ್ಲ ಸಮುದಾಯಗಳ ಜನರ ಬೇಡಿಕೆಗೆ ಸಕಾಲಕ್ಕೆ ಸ್ಪಂದಿಸಿ ತಾವು ಕೆಲಸ ಮಾಡುತ್ತಿರುವುದಾಗಿ ಹೇಳಿದರು.
ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನನ್ನನ್ನು ಜನಸೇವಕನಾಗಿ ಆಯ್ಕೆ ಮಾಡಿದ ಮತಕ್ಷೇತ್ರದ ಪ್ರತಿಯೊಬ್ಬರ ಋಣವನ್ನು ಹೀಗೆ ಅಭಿವೃದ್ಧಿ ಕೆಲಸ ಮಾಡುವ ಮೂಲಕ ತೀರಿಸುವ ಹೊಣೆಗಾರಿಕೆ ನನ್ನದಾಗಿದೆ. ಈ ನಿಟ್ಟಿನಲ್ಲಿ ಇಡೀ ಶಹಾಪುರ ಕ್ಷೇತ್ರಕ್ಕೆ ನ್ಯಾಯ ಒದಗಿಸುವ ಕೆಲಸ ಪ್ರಮಾಣಿಕವಾಗಿ ಮಾಡುವುದಾಗಿ ಸಚಿವ ದರ್ಶನಾಪುರ ಮಾರ್ಮಿಕವಾಗಿ ಹೇಳಿದರು.
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಿಂದ ಕೋಟಿ, ಕೋಟಿ ಜನರ ನೆಮ್ಮದಿ ಜೀವನ ಸಾಗಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ ಅವರ ನೇತೃತ್ವದ ಕಾಂಗ್ರೆಸ್​ ಸರ್ಕಾರ ನುಡಿದಂತೆ ನಡೆದುಕೊಳ್ಳುತ್ತಿದೆ. ಅಭಿವೃದ್ಧಿ ವಿಷಯದಲ್ಲಿ ಶಾಸಕ, ಸಚಿವರು ಕೇಳಿದ್ದನ್ನು ನೀಡುವ ಮೂಲಕ ಜನರ ಮುಂದೆ ನಿರ್ಭಯವಾಗಿ ತಿರುಗಾಡುವಂತ ವಾತವರಣ ನಮ್ಮ ಸರ್ಕಾರ ಮಾಡಿಕೊಟ್ಟಿದೆ ಎಂದು ಹೇಳಿದರು.
ಬಾಣತಿಹಾಳ ಮತ್ತು ಕಿಲಾರಿದೊಡ್ಡಿಯಲ್ಲಿ ನಿರ್ಮಿಸಿಲಾಗುತ್ತಿರುವ ಸಿಸಿ ರಸ್ತೆಗಳ ಕಾಮಗಾರಿ ಗುಣಮಟ್ಟದಿಂದ ಮಾಡಬೇಕು ಮತ್ತು ನಿಗದಿತ ಅವಧಿಯೊಳಗೆ ಮುಗಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.
ಈ ವೇಳೆ ಶಹಾಪುರ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಶಿವಮಹಾಂತಪ್ಪ ಸಾಹು, ಮುಖಂಡರಾದ ತಿರುಪತಿ ಪಾಟೀಲ್​, ಧರ್ಮರಾಜ ದೊರೆ, ಭೀಮಾಶಂಕರ ಮರಿಗೌಡ ಹುಲಕಲ್​, ಸಿದ್ದಣ್ಣ ಕಿಲಾರಿ, ಮಾರುತಿ, ಶಿವಣ್ಣ ದೊರೆ, ಜಹಾಗೀರದಾರ ಗಂಗನಾಳ್​ ಇತರರಿದ್ದರು.
ಸುಳ್ಳು-ಗೊಳ್ಳು ಹೇಳುವವನಲ್ಲ
ಅಭಿವೃದ್ಧಿ ವಿಷಯದಲ್ಲಿ ರಾಜಿಯಾಗುವ ಜನಪ್ರತಿನಿಧಿ ನಾನಲ್ಲ. ನನಗೆ ಜನರ ಮತ್ತು ಕ್ಷೇತ್ರದ ಹಿತ ಮುಖ್ಯ. ನಾನು ನುಡಿದಂತೆ ನಡೆಯುವ ವ್ಯಕ್ತಿ, ಸುಳ್ಳು&ಗೊಳ್ಳು ಹೇಳಿ, ಭೇಟಿ ಬಂದವರ ಭುಜದ ಮೇಲೆ ಕೈಯಿಟ್ಟು ಸುಳ್ಳು ಭರವಸೆ ನೀಡುವ ರಾಜಕಾರಣಿ ನಾನಲ್ಲ. ಅದು ನಮ್ಮ ಕುಟುಂಬದ ರಕ್ತದಲ್ಲಿಯೇ ಇಲ್ಲ. ಕೆಲಸ ಆಗುವುದಿದ್ದರೆ ಮಾಡಿಕೊಡುವೆ, ಆಗದಿದ್ದರೆ ಇಲ್ಲ ಎಂದು ನೇರವಾಗಿ ಹೇಳುವ ಮೂಲಕ ಜನರನ್ನು ಅಲೆದಾಡುವುದು ತಪ್ಪಿಸುವ ಮನೊಭಾವ ನನ್ನದು ಎಂದು ಸಚಿವ ಶರಣಬಸಪ್ಪ ದರ್ಶನಾಪುರ ಮನಬಿಚ್ಚಿ ಹೇಳಿದರು.
"

ಇಷ್ಟರಲ್ಲಿಯೇ ಮುಂಗಾರು ಪ್ರವೇಶ ಆಗುತ್ತದೆ. ರೈತರು ಬಿತ್ತನೆ ಕೆಲಸ ಶುರು ಮಾಡುತ್ತಾರೆ. ಆಗ ಅವರಿಗೆ ಬೇಕಾದ ಪರಿಕರ, ರಸಗೊಬ್ಬರ ನಿಗದಿತ ಅವಧಿಯೊಳಗೆ ಸಿಗುವಂತೆ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿ ವ್ಯವಸ್ಥೆ ಮಾಡಿವೆ.

— > ಶರಣಬಸಪ್ಪ ದರ್ಶನಾಪುರ ಸಚಿವ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net