ಮಕ್ಕಳನ್ನು ಕೆಲಸಕ್ಕೆ ಹಚ್ಚದೆ ಶಾಲೆಗೆ ಕಳಿಸಿ

ಚಿತ್ತಾಪುರ ತಾಲೂಕಿನ ಕಲಗುರ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ವಿಶ್ವ ಬಾಲಕಾರ್ಮಿಕ ವಿರೋಧಿ ದಿನ ಆಚರಿಸಲಾಯಿತು.
ಚಿತ್ತಾಪುರ ತಾಲೂಕಿನ ಕಲಗುರ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ವಿಶ್ವ ಬಾಲಕಾರ್ಮಿಕ ವಿರೋಧಿ ದಿನ ಆಚರಿಸಲಾಯಿತು.
Published on
ಚಿತ್ತಾಪುರ: ಮಕ್ಕಳನ್ನು ಅಂಗಡಿ, ಹೋಟೆಲ್​ ಸೇರಿ ವಿವಿಧೆಡೆ ದುಡಿಯಲು ಹಚ್ಚುವುದು ಅಪರಾಧವಾಗಿದೆ. ಕೆಲಸಕ್ಕೆ ಕಳಿಸುವುದನ್ನು ಬಿಟ್ಟು, ಗುಣಮಟ್ಟದ ಶಿಕ್ಷಣ ನೀಡಿ ನೀಡಿ ಕೆ ಸಂಸ್ಥೆ ಜಿಲ್ಲಾ ಸಂಯೋಜಕ ರಾಹುಲ್​ ಮಾಳಿಗೆ ಹೇಳಿದರು. ಕಲಗುರ್ತಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ರ್ಯೆ ಸಂಸ್ಥೆಯಿಂದ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆಯಲ್ಲಿ ಮಾತನಾಡಿ, ಮಕ್ಕಳ ಹಕ್ಕುಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಬಾಲಕಾರ್ಮಿಕತೆಯಿಂದ ಶಿಕ್ಷಣಕ್ಕೆ ಹೊಡೆತ ಬಿಳುತ್ತಿದೆ. ಮಕ್ಕಳು ದೇಶದ ಆಸ್ತಿ, ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು. ಪ್ರಮುಖರಾದ ನರಸಿಂಹರಾವ್​ ದಂಡಿನ್​, ಬಾಬುರಾವ್​, ಗಂಗಮ್ಮ, ಜಯಮಾಲಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net