ಲೆಕ್ಕಾಚಾರ ಹಾಕಿದರೆ, ದಿನಕ್ಕೆ 10 ಗಂಟೆ ಕೆಲಸ ಮಾಡಿದರೆ 3,500 ರೂಪಾಯಿ ಹಾಗೂ ತಿಂಗಳಿಗೆ ಬರೋಬ್ಬರಿ 1,05,000 ರೂಪಾಯಿಗಳಿಗಿಂತ ಹೆಚ್ಚು ಆದಾಯ ಸಿಗುತ್ತದೆ. ರಸ್ತೆ ಬದಿಯ ತರಕಾರಿ ವ್ಯಾಪಾರಿಯೊಬ್ಬ ತನ್ನ ತಲೆಯ ಮೇಲೆ ಸ್ಮಾರ್ಟ್ಫೋನ್ ಕಟ್ಟಿಕೊಂಡು ಓಡಾಡುತ್ತಾ, ಇವತ್ತಿನ ಕಾರ್ಪೊರೇಟ್ ಇಂಡಿಯಾದ ಅರ್ಧದಷ್ಟು ಉದ್ಯೋಗಿಗಳಿಗಿಂತ ಹೆಚ್ಚು ಸಂಪಾದಿಸುತ್ತಿದ್ದಾನೆ ಎಂಬ ಸತ್ಯವನ್ನು ನನಗಿನ್ನೂ ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಿಜಕ್ಕೂ ಭವಿಷ್ಯವು ಅತ್ಯಂತ ರೋಮಾಂಚನಕಾರಿಯಾಗಿದೆ ಎಂದು ವೈಭವ್ ಬರೆದುಕೊಂಡಿದ್ದಾರೆ.