ಸಂದರ್ಶನಗಳಿಂದ ಬಂದ ಹಣವೂ ಕರಗಿಹೋಯಿತು. ವಯೋಸಹಜ ಆರೋಗ್ಯ ಸಮಸ್ಯೆಗಳು ಮತ್ತು ಮದ್ಯದ ವ್ಯಸನದಿಂದಾಗಿ ಅವರ ಜೀವನ ಮತ್ತೆ ದುಸ್ತರವಾಯಿತು. ಈ ಹಿಂದೆ ಅವರು ಮೃತಪಟ್ಟಿದ್ದಾರೆ ಎಂಬ ವದಂತಿಗಳು ಹರಡಿದಾಗ ತಾವೇ ಮಾಧ್ಯಮಗಳ ಮುಂದೆ ಬಂದು ಅದನ್ನು ನಿರಾಕರಿಸಿದ್ದರು. ಆದರೆ, ಇತ್ತೀಚಿನ ತೀವ್ರ ಬೇಸಿಗೆಯ ಬಿಸಿಲಿನ ತಾಪಕ್ಕೆ ತುತ್ತಾದ ಈ ತಾತ, ಚಿಕಿತ್ಸೆ ಫಲಿಸದೆ ಬಾರದ ಲೋಕಕ್ಕೆ ಪಯಣಿಸಿದ್ದಾರೆ, (ಏಜೆನ್ಸೀಸ್).