ಸ್ವಾವಲಂಬಿ ಬದುಕಿಗೆ ಪ್ರಾಧಾನ್ಯತೆ ಅಗತ್ಯ

ಕಲಬುರಗಿಯಲ್ಲಿ ಸಿದ್ಧಲಿಂಗೇಶ್ವರ ಬುಕ್​ ಡಿಪೋ ಮತ್ತು ಪ್ರಕಾಶನ ಸಂಸ್ಥೆಯಿಂದ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ  ಹುಲಸೂರಿನ ಶ್ರೀ ಶಿವಾನಂದ ಸ್ವಾಮಿಗಳಿಗೆ ಬಸವ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಸವರಾಜ ಕೊನೆಕ್​, ಡಾ.ಕಾವ್ಯಶ್ರೀ ಮಹಾಗಾಂವಕರ್​, ಡಾ.ಗವಿಸಿದ್ದಪ್ಪ ಪಾಟೀಲ್​, ಸಿದ್ದಲಿಂಗ ಕೊನೇಕ್​, ಪ್ರೊ.ಶಿವರಾಜ್​ ಪಾಟೀಲ್​ ಇತರರಿದ್ದರು.
ಕಲಬುರಗಿಯಲ್ಲಿ ಸಿದ್ಧಲಿಂಗೇಶ್ವರ ಬುಕ್​ ಡಿಪೋ ಮತ್ತು ಪ್ರಕಾಶನ ಸಂಸ್ಥೆಯಿಂದ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಹುಲಸೂರಿನ ಶ್ರೀ ಶಿವಾನಂದ ಸ್ವಾಮಿಗಳಿಗೆ ಬಸವ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಸವರಾಜ ಕೊನೆಕ್​, ಡಾ.ಕಾವ್ಯಶ್ರೀ ಮಹಾಗಾಂವಕರ್​, ಡಾ.ಗವಿಸಿದ್ದಪ್ಪ ಪಾಟೀಲ್​, ಸಿದ್ದಲಿಂಗ ಕೊನೇಕ್​, ಪ್ರೊ.ಶಿವರಾಜ್​ ಪಾಟೀಲ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಿಯುಕೆ ಕುಲಸಚಿವ ಪ್ರೊ.ಆರ್​.ಆರ್​.ಬಿರಾದಾರ್​ ಹೇಳಿಕೆ
  • ರಾಜ್ಯಮಟ್ಟದ ಬಸವ ಸಿರಿ ಪ್ರಶಸ್ತಿ ಪ್ರದಾನ
ಕಲಬುರಗಿ: ಬಸವಣ್ಣ ಅವರು ಕಾಯಕ ಮಾಡುವುದರ ಮೂಲಕ ಸ್ವಾವಲಂಬಿ ಜೀವನದ ಕುರಿತು ಒತ್ತಿ ಹೇಳಿದ್ದಾರೆ. ಹೀಗಾಗಿ ನಾವು ಬಸವಣ್ಣನ ಮಾರ್ಗದರ್ಶನಂತೆ ನಡೆದುಕೊಳ್ಳಬೇಕು. 12ನೇ ಶತಮಾನದಲ್ಲಿ ಬಸವಾದಿ ಶರಣರು ಸಮ ಸಮಾಜ ನಿರ್ಮಿಸಿದರು. ವಚನಗಳ ಮೂಲಕ ಸಮಾಜದ ಅಂಕು ಡೊಂಕು ತಿದ್ದಿದರು ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಆರ್​.ಆರ್​.ಬಿರಾದಾರ್​ ಹೇಳಿದರು.
ಕೆಕೆಸಿಸಿಐ ಸಭಾಂಗಣದಲ್ಲಿ ಸಿದ್ಧಲಿಂಗೇಶ್ವರ ಬುಕ್​ ಡಿಪೋ ಮತ್ತು ಪ್ರಕಾಶನ ಸಂಸ್ಥೆಯಿಂದ ಬಸವ ಪ್ರಕಾಶನ ಸಂಸ್ಥಾಪಕರಾದ ಲಿಂ.ಬಸಮ್ಮ ಕೊನೇಕ್​ ಅವರ 13ನೇ ಪುಣ್ಯಸ್ಮರಣೋತ್ಸವ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಬಸವ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭ, ಕಾಯಕ ದಿನಾಚರಣೆ ಮತ್ತು ಕೃತಿಗಳ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿ, ಇತ್ತೀಚೆಗೆ ಪುಸ್ತಕಗಳನ್ನು ಬರೆಯುವವರ ಹಾಗೂ ಖರೀದಿಸಿ ಓದುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಇಂದಿನ ಯುವಕರು ಬಸವಣ್ಣ, ಅಕ್ಕಮಹಾದೇವಿ ಸೇರಿ ಶರಣರ ಜೀವನ ಸಾಧನೆ ಪುಸ್ತಕಗಳನ್ನು ಓದಿ ಪ್ರೇರಣೆ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಹುಲಸೂರಿನ ಗುರು ಬಸವೇಶ್ವರ ಸಂಸ್ಥಾನಮಠದ ಶ್ರೀ ಶಿವಾನಂದ ಸ್ವಾಮಿಗಳು ಬಸವ ಸಿರಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಸಾಹಿತಿ ಡಾ.ಕಾವ್ಯಶ್ರೀ ಮಹಾಗಾಂವಕರ್​ ಮಾತನಾಡಿದರು. ಡಾ.ಗವಿಸಿದ್ದಪ್ಪ ಪಾಟೀಲ್​ ಕೃತಿಗಳ ಪರಿಚಯ ಮಾಡಿದರು. ಸಿದ್ಧಲಿಂಗೇಶ್ವರ ಬುಕ್​ ಡಿಪೋ ಮತ್ತು ಪ್ರಕಾಶನ ಅಧ್ಯ ಡಾ.ಬಸವರಾಜ ಕೊನೇಕ್​ ಅಧ್ಯತೆ ವಹಿಸಿದ್ದರು. ಪ್ರಮುಖರಾದ ಸಿದ್ದಲಿಂಗ ಕೊನೇಕ್​, ಶರಣಬಸವ ಕೊನೇಕ್​, ಈರಣ್ಣ, ಪ್ರೀತಿ, ಡಾ.ಲಕ್ಷಿ$್ಮ ಕೊನೇಕ್​, ವೀರಣ್ಣ ಮಹಾಂತಗೋಳ್​, ಶಿವಾನಂದ ಕಶೆಟ್ಟಿ, ಡಾ.ಚಿ.ಸಿ.ನಿಂಗಣ್ಣ, ಶಿವರಾಜ ಕಾಳಗಿ, ಗಂಗಾಧರ ದೇಸಾಯಿ ಇತರರಿದ್ದರು.
ಡಾ.ಸಿ.ಆರ್​.ಚಂದ್ರಶೇಖರ ಅವರ ನಾಲ್ಕು ಹಾಗೂ ಶರಣಬಸಪ್ಪ ವಡ್ಡನಕೇರಿ ಅವರ ಒಂದು ಸೇರಿ ಐದು ಕೃತಿಗಳು ಲೋಕಾರ್ಪಣೆಗೊಂಡವು. ಪ್ರೊ.ಶಿವರಾಜ ಪಾಟೀಲ್​ ಪ್ರಾಸ್ತಾವಿಕ ಮಾತನಾಡಿದರು. ಡಾ.ಶರಣಬಸಪ್ಪ ವಡ್ಡನಕೇರಿ ನಿರೂಪಣೆ ಮಾಡಿದರು.
ಸಾಧಕರಿಗೆ ಗೌರವ
ಪ್ರಸಕ್ತ ಸಾಲಿನ ರಾಜ್ಯಮಟ್ಟದ ಬಸವ ಸಿರಿ ಪ್ರಶಸ್ತಿ ಹಾಗೂ 11 ಸಾವಿರ ರೂ. ಗೌರವಧನವನ್ನು ಹುಲಸೂರಿನ ಶ್ರೀ ಗುರು ಬಸವೇಶ್ವರ ಸಂಸ್ಥಾನ ಮಠದ ಶ್ರೀ ಶಿವಾನಂದ ಸ್ವಾಮಿಗಳಿಗೆ ನೀಡಿ ಗೌರವಿಸಲಾಯಿತು. ಜತೆಗೆ ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ 3ನೇ ರ್ಯಾಂಕ್​ ಪಡೆದ ಗಣೇಶ ಬೋಸ್ಲೆ ಹಾಗೂ ಪಿಯುಸಿಯಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್​ ಪಡೆದ ಸೃಷ್ಟಿ ಪಾಟೀಲ್​ ಅವರನ್ನು ಸನ್ಮಾನಿಸಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net