ಗುರ್ಲಾಪುರ: ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನಿರಂತರ ಪರಿಶ್ರಮ ಅಗತ್ಯ ಎಂದು ಭಗೀರಥ ಯುವತಿ ಮಂಡಲದ ಅಧ್ಯೆ ಕಸ್ತೂರಿ ಹೆಗ್ಗಾನಿ ಹೇಳಿದರು. ಗ್ರಾಮದಲ್ಲಿ ಕೇಂದ್ರ ಕ್ರೀಡಾ ಸಚಿವಾಲಯ, ಮೈ ಭಾರತ ಕೇಂದ್ರ, ಜೈ ಕರ್ನಾಟಕ ಅಂಗವಿಕಲರ ಗ್ರಾಮೀಣ ಅಭಿವೃದ್ಧಿ ಸಂ ಹಾಗೂ ಸಂಗೊಳ್ಳಿ ರಾಯಣ್ಣ ಕ್ರೀಡಾ ಯುವಕ ಸಂ ಹಾಗೂ ಮೈ ಭಾರತ ಯುವ ಮಂಡಳ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಕಾಸ್ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಟನೆ ಜಿಲ್ಲಾಧ್ಯ ಸಿದ್ಧಣ್ಣ ದುರದುಂಡಿ ಮಾತನಾಡಿ, ಗ್ರಾಮೀಣ ಭಾಗದ ಯುವಕರು ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಪ್ರತಿ ಗ್ರಾಮದಲ್ಲಿ ಸಂಟನೆ ಅಗತ್ಯವಾಗಿದೆ ಎಂದರು. ನಾಗನೂರಿನ ಡಾ.ಕಾವ್ಯಶ್ರೀ ಅಮ್ಮ ಮಾತನಾಡಿ, ಯುವ ಸಮುದಾಯ ಒಳ್ಳೆಯ ಕಾರ್ಯ ಮಾಡಿದರೆ ರಾಷ್ಟ್ರ ಶ್ರೇಯೋಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು. ಸಂಗೊಳ್ಳಿ ರಾಯಣ್ಣ ಕ್ರೀಡಾ ಮತ್ತು ಯುವಕ ಸಂದ ಅಧ್ಯ ಗೋಪಾಲ ಗಡ್ಡೆಕಾರ, ರು ಕೇದಾರಿ, ಸುಭಾಸ ಸುಳ್ಳನ್ನವರ, ಮಹಾದೇವ ನಡುವಿನಕೇರಿ, ಪರಮಾನಂದ ಬೆಳಗಲಿ, ಶ್ರೀಶೈಲ ಧರ್ಮಟ್ಟಿ, ಕೃಷ್ಣ ಶ್ಯಾಬಣ್ಣವರ, ಗಂಗಪ್ಪ ಗಡ್ಡೆಕಾರ, ನಂದೀಶ ಅಂಬಿಗೇರ, ಪ್ರವಿಣ ಸುಳ್ಳನ್ನವರ, ಸುರೇಶ ಶ್ಯಾಬನ್ನವರ ಇತರರಿದ್ದರು.