ಆತ್ಮವಿಶ್ವಾಸ ಬೆಳೆಸುವ ಅಡಿಪಾಯ ವಿದ್ಯೆ

ಸವದತ್ತಿ ನಗರದಲ್ಲಿ ಹಮ್ಮಿಕೊಂಡಿದ್ದ ಕೆಎಲ್​ಇ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ  ಹಮ್ಮಿಕೊಂಡಿದ್ದ ವಾರ್ಷಿಕೋತ್ಸವವನ್ನು ಬಿಇಒ ಎ.ಎ.ಖಾಜಿ ಉದ್ಘಾಟಿಸಿದರು. ಡಾ.ಎ.ಸಿ.ಕಬ್ಬಿಣ, ಬಸವರಾಜ ಕಾರದಗಿ, ಅಶೋಕ ಉದಪುಡಿ ಇತರರಿದ್ದರು.
ಸವದತ್ತಿ ನಗರದಲ್ಲಿ ಹಮ್ಮಿಕೊಂಡಿದ್ದ ಕೆಎಲ್​ಇ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವವನ್ನು ಬಿಇಒ ಎ.ಎ.ಖಾಜಿ ಉದ್ಘಾಟಿಸಿದರು. ಡಾ.ಎ.ಸಿ.ಕಬ್ಬಿಣ, ಬಸವರಾಜ ಕಾರದಗಿ, ಅಶೋಕ ಉದಪುಡಿ ಇತರರಿದ್ದರು.
Published on
ಸವದತ್ತಿ: ಶಿಣ ಕೇವಲ ಅಧ್ಯಯನಕ್ಕೆ ಸೀಮಿತವಾಗದೆ ಮಕ್ಕಳಲ್ಲಿ ಶಿಸ್ತು, ಮೌಲ್ಯ ಹಾಗೂ ಆತ್ಮವಿಶ್ವಾಸ ಬೆಳೆಸುವ ಅಡಿಪಾಯವಾಗಬೇಕು ಎಂದು ಬಿಇಒ ಎ.ಎ. ಖಾಜಿ ಹೇಳಿದರು. ನಗರದ ಗುರು ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕೆಎಲ್​ಇ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಪ್ರಾಥಮಿಕ ಹಂತದ ಶಿಣವೇ ದಿಕ್ಸೂಚಿಯಾಗಿದ್ದು, ಶಿಕರ ಪಾತ್ರ ಮಹತ್ವದ್ದಾಗಿದೆ. ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಮೂಡಿಸುವ ಜತೆಗೆ ಉತ್ತಮ ನಾಗರಿಕರನ್ನಾಗಿ ರೂಪಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ. ಪಾಲಕರು ಸಹ ಮಕ್ಕಳ ಶೈಣಿಕ ಪ್ರಗತಿಯಲ್ಲಿ ಶಾಲೆಯೊಂದಿಗೆ ಕೈಜೋಡಿಸಬೇಕೆಂದು ಸಲಹೆ ನೀಡಿದರು. ವಿದ್ಯಾರ್ಥಿಗಳು ನೃತ್ಯ, ಹಾಡು, ನಾಟಕ ಹಾಗೂ ಭಾಷಣ ಸೇರಿ ವಿವಿಧ ಸಾಂಸತಿಕ ಚಟುವಟಿಕೆ ಪ್ರದರ್ಶಿಸಿದರು. ಶೈಣಿಕ ಹಾಗೂ ಕ್ರೀಡಾ ೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಡಾ.ಅಭಿನಂದನ್​ ಕಬ್ಬಿಣ ಅವರನ್ನು ಸನ್ಮಾನಿಸಲಾಯಿತು. ಕೆಎಲ್​ಇ ಸ್ಥಾನಿಕ ಆಡಳಿತ ಮಂಡಳಿ ಸದಸ್ಯ ಅಶೋಕ ಉದಪುಡಿ, ಬಾಬು ಗಾಡಗೋಳಿ, ಬಸವರಾಜ ಕಾರದಗಿ, ಬಿ.ಯು.ಬಿ. ನರಗುಂದ, ಪಿ.ಬಿ.ತುರಮರಿ, ರವಿ ನಲವಡೆ ಇತರರಿದ್ದರು. ಮುಖ್ಯಶಿಕ್ಷಕ ಎಂ.ಜೆ.ಅಂಬಲಿ ಸ್ವಾಗತಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net