ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯಕ್ಕೆ ಆಯ್ಕೆ

ಚನ್ನಪಟ್ಟಣ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯಕ್ಕೆ ಹಮ್ಮಿಕೊಂಡಿದ್ದ ಪದಾಧಿಕಾರಿ ಆಯ್ಕೆ ಚುನಾವಣೆಯಲ್ಲಿ ಭಾಗವಹಿಸಿದ ಸಂಸ್ಥೆಯ ನಿರ್ದೇಶಕರು. ನಿರ್ದೇಶಕರಾದ ಚಕ್ಕೆರೆ ವೆಂಕಟರಾಮೇಗೌಡ, ಎಸ್.ಟಿ ನಾರಾಯಣಗೌಡ, ಎಂ.ಸಿ.ಎಚ್ ಮೆಹರೀಶ್, ನಾಗವಾರ ರಂಗಸ್ವಾಮಿ, ಟಿ.ಪಿ ಹನುಮಂತಯ್ಯ, ಎಂ.ಎ ಮಾಲಿನಿ, ಎನ್.ಎಸ್ ಬಸವರಾಜು, ಟಿ.ಎಸ್ ಅಭಿಲಾಷ್‌ಗೌಡ ಪುಟ್ಟರಾಜೇಗೌಡ, ಡಿ.ಎಂ ರವಿ, ಯುಪಿ ಧರಣೀಶ್ ಇದ್ದರು.

Published on

ಚನ್ನಪಟ್ಟಣ :

ನಗರದ ಪ್ರತಿಷ್ಠಿತ ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಅಧ್ಯಕ್ಷರಾಗಿ ಟಿ.ಕೆ.ಯೋಗೀಶ್ ಮತ್ತೊಮ್ಮೆ ಪುನರಾಯ್ಕೆಯಾದರು. ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ 15 ನಿರ್ದೇಶಕರ ಆಯ್ಕೆಗೆ ಕಳೆದ ಜು.19 ರಂದು ಚುನಾವಣೆ ನಡೆದಿತ್ತು. ಈ ಹಿನ್ನೆಲೆಯಡಿ ಸಂಸ್ಥೆ ಪದಾಧಿಕಾರಿ ಆಯ್ಕೆಗೆ ಸೋಮವಾರ ಚುನಾವಣೆ ನಡೆಯಿತು

ಆಡಳಿತ ಮಂಡಳಿ ಅಧ್ಯಕ್ಷರಾಗಿ ಟಿ. ಕೆ. ಯೋಗೇಶ್, ಕಾರ್ಯದರ್ಶಿಯಾ
ಗಿ ವಿ. ಬಿ. ಚಂದ್ರಯ್ಯ, ಉಪಾಧ್ಯಕ್ಷರಾಗಿ ನಾಗವಾರ ಶಂಭೂಗೌಡ ಹಾಗೂ ಖಜಾಂಚಿಯಾಗಿ ಎ.ಎಂ ಅನಂತಮೂರ್ತಿ ಅವಿರೋಧವಾಗಿ ಆಯ್ಕೆಯಾದರು. ಈ ನಾಲ್ಕು ಸ್ಥಾನಗಳಿಗೆ ತಲಾ ಒಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಇವರೇ ಅವಿರೋಧ ಆಯ್ಕೆಯಾದರೆಂದು ಚುನಾವಣಾಧಿಕಾರಿ ಜವರೇಗೌಡ ಘೋಷಿಸಿದರು.
ನೂತನ ಅಧ್ಯಕ್ಷರಾಗಿ ಟಿ.ಕೆ.ಯೋಗೀಶ್ ಮಾತನಾಡಿ, ಬಡ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಮಹನೀಯರು ಶಿಕ್ಷಣ ಸಂಸ್ಥೆ ಕಟ್ಟಿದ್ದಾರೆ. ಮತ್ತೊಂಮ್ಮೆ ನನ್ನನ್ನು ಅಧ್ಯಕ್ಷ ಸ್ಥಾನಕ್ಕೆ ಎಲ್ಲ ನಿರ್ದೇಶಕರು ಅವಿರೋಧ ಆಯ್ಕೆ ಮಾಡಿದ್ದಾರೆ. ಈ ವಿಶ್ವಾಸಕ್ಕೆ ಧಕ್ಕೆ ಬಾರದೇ ಸಂಸ್ಥೆ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net