ಚನ್ನಮಾನಹಳ್ಳಿ ಡೇರಿಗೆ ಆಯ್ಕೆ

ಕೈಲಾಂಚ ಹೋಬಳಿ ಚನ್ನಮಾನಹಳ್ಳಿ ಡೇರಿ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಸಿ.ಎಂ.  ಅಶೋಕ್  ಉಪಾಧ್ಯಕ್ಷರಾಗಿ ಕೆಂಪಮ್ಮ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸಂಘದ ನಿರ್ದೇಶಕರು, ಮುಖಂಡರು ಅಭಿನಂದಿಸಿದರು. ಗ್ರಾಪಂ ಮಾಜಿ ಸದಸ್ಯ ಎಂ. ಭಾಸ್ಕರ್, ಡೇರಿ ಮುಖ್ಯಕಾರ್ಯನಿರ್ವಾಹಕ ಅರ್ಕೇಶ್, ಮುಖಂಡರಾದ ಗಿರಿಯಪ್ಪ, ಮಹೇಶ್, ಮಲ್ಲೇಶ್, ಶಿವಪ್ರಕಾಶ್ ಇದ್ದರು.
ಕೈಲಾಂಚ ಹೋಬಳಿ ಚನ್ನಮಾನಹಳ್ಳಿ ಡೇರಿ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಸಿ.ಎಂ. ಅಶೋಕ್ ಉಪಾಧ್ಯಕ್ಷರಾಗಿ ಕೆಂಪಮ್ಮ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸಂಘದ ನಿರ್ದೇಶಕರು, ಮುಖಂಡರು ಅಭಿನಂದಿಸಿದರು. ಗ್ರಾಪಂ ಮಾಜಿ ಸದಸ್ಯ ಎಂ. ಭಾಸ್ಕರ್, ಡೇರಿ ಮುಖ್ಯಕಾರ್ಯನಿರ್ವಾಹಕ ಅರ್ಕೇಶ್, ಮುಖಂಡರಾದ ಗಿರಿಯಪ್ಪ, ಮಹೇಶ್, ಮಲ್ಲೇಶ್, ಶಿವಪ್ರಕಾಶ್ ಇದ್ದರು.
Published on
ಕೈಲಾಂಚ :ಹೋಬಳಿಯ ಚನ್ನಮಾನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಸಂಘದ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಸಿ.ಎಂ. ಪ್ರಕಾಶ್, ಉಪಾಧ್ಯಕ್ಷರಾಗಿ ಕೆಂಪಮ್ಮ ಅವಿರೋಧವಾಗಿ ಆಯ್ಕೆಯಾದರು.
ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಸಂಘದ ನಿರ್ದೇಶಕರು, ಗ್ರಾಮಸ್ಥರು, ಮುಖಂಡರು, ಹಾಲು ಉತ್ಪಾದಕರು ಸಂಘದ ಆವರಣದಲ್ಲಿ ಅಭಿನಂದಿಸಿದರು. ಚುನಾವಣಾಧಿಕಾರಿಯಾಗಿ ಪುರುಷೋತ್ತಮ್ ಕಾರ್ಯನಿರ್ವಹಿಸಿದರು.
ನೂತನ ಅಧ್ಯಕ್ಷ ಸಿ.ಎಂ. ಪ್ರಕಾಶ್ ಮಾತನಾಡಿ, ಹಾಲು ಉತ್ಪಾದಕರ ಶ್ರಮದಿಂದ ಸಂಘ ಉತ್ತಮ ಪ್ರಗತಿಯಲ್ಲಿದೆ. ಪ್ರತಿ ವರ್ಷ ರೈತರಿಗೆ ಒಕ್ಕೂಟದಿಂದ ದೊರೆಯುವ ಪ್ರಯೋಜನ ಸಂಘದಿಂದ ಸಿಗುವ ಸವಲತ್ತುಗಳನ್ನು ರೈತರಿಗೆ ತಲುಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಂಘ ಆಡಳಿತ ಮಂಡಳಿ ಸದಸ್ಯರ ಉತ್ತಮ ಸಹಕಾರ ಪಡೆದು ಮತ್ತಷ್ಟು ಅಭಿವೃದ್ಧಿ ಕಾಣುತ್ತದೆ. ಇದರಿಂದ ಹಾಲು ಉತ್ಪಾದಕರಿಗೆ ಇನ್ನೂ ಹೆಚ್ಚಿನ ಸವಲತ್ತು, ಲಾಭಸಿಗಲಿದೆ ಎಂದರು.
ಸಂಘದ ಉಪಾಧ್ಯಕ್ಷೆ ಕೆಂಪಮ್ಮ ಮಾತನಾಡಿ, ಹಾಲು ಉತ್ಪಾದಕರ ಸಂಘಗಳು ಅಭಿವೃದ್ಧಿಗೊಂಡರೆ ಗ್ರಾಮಗಳ ಅಭಿವೃದ್ಧಿ ಸಾಧ್ಯ. ಸಂಘ ಲಾಭದಲ್ಲಿ ನಡೆಯುತ್ತಿರುವುದರಿಂದ ಪ್ರತೀ ವರ್ಷ ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಸಲಾಗುತ್ತಿದೆ. ಜತೆಗೆ ಸಾಮಾಜಿಕ ಸೇವಾ ಕಾರ್ಯಗಳು, ಸಮಾಜಮುಖಿ ಕಾರ್ಯಗಳಲ್ಲಿ ಸಂಘ ಸದಾ ಮುಂದಿದೆ. ಸಂಘದ ಅಭಿವೃದ್ಧಿ ಹಾಲು ಉತ್ಪಾದಕ ರೈತರ ಕೈಯಲ್ಲಿದ್ದು ಉತ್ತಮ ತಳಿಯ ರಾಸುಗಳನ್ನು ಸಾಕಿ ಸಂಘದಿಂದ ಲಾಭ ಪಡೆದು ಆರ್ಥಿಕವಾಗಿ ಸದೃಡರಾಗಬೇಕು ಎಂದು ತಿಳಿಸಿದರು.
ಸಂಘದ ನಿರ್ದೇಶಕರಾದ ಪಿ. ವಾಸುದೇವ್, ಆರ್. ಕುಮಾರ್, ಎಂ. ಮುತ್ತಯ್ಯ, ಉಮಾ, ಎಂ ಅಶೋಕ್, ಸಿ. ರಾಜು, ಚಂದ್ರಮ್ಮ, ಶಿವಮಲ್ಲಯ್ಯ, ಜಿ. ಶ್ರೀಕಾಂತ, ಶಿವಣ್ಣ, ಮುಖಂಡರಾದ ಗಿರಿಯಪ್ಪ, ಮಹೇಶ್, ಮಲ್ಲೇಶ್, ರಂಜನ್, ಶಿವಪ್ರಕಾಶ್, ಜೈಕುಮಾರ್, ದಿಲೀಪ್, ಅನಿಲ್‌ಕುಮಾರ್ ಹಾಲು ಪರೀಕ್ಷಕ ಸಿ.ಪಿ. ಕುಮಾರ್, ಸಿಬ್ಬಂದಿ ಲಕ್ಷ್ಮಣ, ಶಿವಕುಮಾರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net