ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಲಿಂಗರಾಜ ಕಾಲೇಜಿನ ಎನ್‌ಸಿಸಿ ಘಟಕದ ಕೆಡೆಟ್ ಯೋಗರಾಜ ರಾಮಗೋನಟ್ಟಿ ತಮಿಳನಾಡಿನಲ್ಲಿ ಜು.30ರವರೆಗೆ ನಡೆಯಲಿರುವ ರಾಷ್ಟ್ರ ಮಟ್ಟದ ಎನ್‌ಸಿಸಿ ಅಂತರ ನಿರ್ದೇಶನಾಲಯ(ಡಿಜಿ ಎನ್‌ಸಿಸಿ, ನವದೆಹಲಿ) ಶೂಟಿಂಗ್ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗಿದ್ದಾನೆ.
ಬೆಂಗಳೂರಿನಲ್ಲಿ ಈಚೆಗೆ ಜರುಗಿದ ರಾಜ್ಯ ಮಟ್ಟದ ಶೂಟಿಂಗ್ ಆಯ್ಕೆ ಶಿಬಿರದಲ್ಲಿ ಅಂತಿಮ ಘಟ್ಟದ ಅಗ್ರ ಶ್ರೇಯಾಂಕದ 18ರಲ್ಲಿ ಆಯ್ಕೆಯಾಗಿದ್ದಾನೆ.
ಯೋಗರಾಜಗೆ ಕೆಎಲ್‌ಇ ಕಾರ್ಯಾಧ್ಯಕ್ಷ ಅಮಿತ ಕೋರೆ, ಕಾರ್ಯದರ್ಶಿ ಡಾ.ಸುನೀಲ ಜಲಾಲಪುರೆ, ಜಂಟಿ ಕಾರ್ಯದರ್ಶಿ ಡಾ.ಪ್ರಕಾಶ ಕಡಕೋಳ, ಸಿ.ರಾಜಶೇಖರ, ಸುನೀಲ ದಾಗರ, ಸಿದ್ಧಾರ್ಥ ರೇಡೂ, ಕಲ್ಲಪ್ಪ ಪಾಟೀಲ, ಡಾ.ಎಚ್.ಎಸ್.ಮೇಲಿನಮನಿ, ಡಾ.ಮಹೇಶ ಗುರನಗೌಡರ ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ.